ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ದೇಶದಲ್ಲಿ ಮುಸ್ಲಿಂ ಜನಸಂಖ್ಯೆಯು “ಕಡಿಮೆಯಾಗುತ್ತಿದೆ” ಎಂದು ಹೇಳಿದ್ದಾರೆ.
ಹೆಚ್ಚುತ್ತಿರುವ ಜನಸಂಖ್ಯೆಯು ಹೊರೆಯಾಗದಂತೆ ನೋಡಿಕೊಳ್ಳಲು ಸಮಗ್ರ ಜನಸಂಖ್ಯಾ ನೀತಿಗೆ ಭಾಗವತ್ ಕರೆ ನೀಡಿದ ಕೆಲವು ದಿನಗಳ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಇಬ್ಬರು ಮಕ್ಕಳ ನಡುವಿನ ಅಂತರವನ್ನು ಕಾಯ್ದುಕೊಳ್ಳಲು ಮುಸ್ಲಿಂ ಸಮುದಾಯವು ಕುಟುಂಬ ಯೋಜನಾ ಸಾಧನ, ಕಾಂಡೋಮ್ ಅನ್ನು ಹೆಚ್ಚು ಬಳಸುತ್ತದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಓವೈಸಿ, ಭಾಗವತ್ ಇದನ್ನು ಉಲ್ಲೇಖಿಸುವುದಿಲ್ಲ ಮತ್ತು ಜನಸಂಖ್ಯಾ ಬೆಳವಣಿಗೆಗಳ ಬಗ್ಗೆ ಚರ್ಚಿಸುವ ಮೊದಲು ಅವರು ದತ್ತಾಂಶವನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು. “ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿಲ್ಲ. ಅದರ ಬಗ್ಗೆ ಯಾವುದೇ ಉದ್ವೇಗ ಬೇಡ. ನಮ್ಮ ಜನಸಂಖ್ಯೆ ಕ್ಷೀಣಿಸುತ್ತಿದೆ. ಮುಸ್ಲಿಮರ ಮಕ್ಕಳ ಟಿಎಫ್ಆರ್ (ಒಟ್ಟು ಫಲವತ್ತತೆಯ ಪ್ರಮಾಣ) ಕಡಿಮೆಯಾಗುತ್ತಿದೆ. ಇಬ್ಬರು ಮಕ್ಕಳ ನಡುವೆ ಯಾರು ಹೆಚ್ಚು ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆಂದು ನಿಮಗೆ ತಿಳಿದಿದೆಯೇ? ಮುಸ್ಲಿಮರು ಅದನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಕಾಂಡೋಮ್ ಗಳನ್ನು ಯಾರು ಹೆಚ್ಚು ಬಳಸುತ್ತಿದ್ದಾರೆ? ನಾವು ಬಳಸುತ್ತಿದ್ದೇವೆ ಈ ಬಗ್ಗೆ ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ” ಎಂದು ಓವೈಸಿ ಹೇಳಿದರು.