ಉಡುಪಿ : ಮಥುರಾದ ಶ್ರೀ ಕೃಷ್ಣ ದೇವಸ್ಥಾನ ವಿಮೋಚನಾ ವಿಚಾರವಾಗಿ ಉಡುಪಿಯಲ್ಲಿ ಬಿಜೆಪಿಯ ಮಾಜಿ ಶಾಸಕ ಸಿಟಿ ರವಿ ಮಾತನಾಡಿದ್ದು ಅತಿಕ್ರಮಣ ಜಾಗದಲ್ಲಿ ನಮಾಜ್ ಮಾಡಿದರೆ ಅದು ಹರಾಮಾಗುತ್ತದೆ ಇದನ್ನು ಸ್ವತಃ ಸಜ್ಜನ ಮುಸಲ್ಮಾನರೆ ಹೇಳುತ್ತಾರೆ ಎಂದು ಸಿಟಿ ರವಿ ತಿಳಿಸಿದರು.
ಜ್ಞಾನವಾಪಿಯ ನಂದಿ ಕಾಶಿಯ ಪುನೂರುಥಾನಕ್ಕೆ ಕಾಯುತ್ತಿದ್ದಾನೆ. ಹಿಂದಿನವರು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಲು ಇದೀಗ ಅವಕಾಶವಿದೆ.ರಾಮ ಕಾಲ್ಪನಿಕ ಅಂದವರು ರಾಮನಾಮ ಜಪ ಆರಂಭಿಸಿದ್ದಾರೆ.ರಾಮ ಕೃಷ್ಣ ಶಿವನ ಜೊತೆ ಮುಸಲ್ಮಾನರು ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಉಡುಪಿಯಲ್ಲಿ ಬಿಜೆಪಿಯ ಮಾಜಿ ಶಾಸಕ ಸಿಟಿ ರವಿ ಹೇಳಿಕೆ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಅಯೋಧ್ಯೆಯಲ್ಲಿ ಐತಿಹಾಸಿಕ ಕ್ಷಣ ಎಂದೇ ಹೇಳಲಾಗುತ್ತಿರುವ ನೂತನವಾಗಿ ನಿರ್ಮಾಣವಾಗಿರುವ ರಾಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು ಅಲ್ಲದೆ ಇಡೀ ದೇಶದ ಜನತೆಯ ಕೂಡ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದೆ.