ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಕೆಲ ಮುಸ್ಲಿಂ ಸಮುದಾಯದ ಜನರು ಭೇಟಿ ನೀಡಿದರು. 575 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲಿರುವ ಹನುಮನ ದರ್ಶನ ಪಡೆದು ಪುನೀತ್ರಾದ್ರು.
BIGG NEWS: ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಕನ್ನಡ ಹುಡುಗಿ ಜತೆ ಲವ್ವಿಡಲ್ವಿ
ಕೆಲವು ಮುಸ್ಲಿಮರು ಹನುಮಾನ್ ಭಕ್ತರಿದ್ದಾರೆ. ಮೊನ್ನೆಯಷ್ಟೇ ಮಹ್ಮದ್ ಜಾಫರ್ ಹೆಸರಿನ ವ್ಯಕ್ತಿ ಹನುಮ ಮಾಲೆ ಧರಿಸಿ ಇತರ ಭಕ್ತರೊಡನೆ ಹನುಮ ಜಪದಲ್ಲಿ ತೊಡಗಿದ್ದರು.ಶುಕ್ರವಾರದಂದು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಗಂಜಳ್ಳಿಯ ಕೆಲ ಮುಸ್ಲಿಂ ಮಹಿಳೆಯರು ಗಂಗಾವತಿ ಬಳಿಯಿರುವ ಅಂಜನಾದ್ರಿ ಬೆಟ್ಟಕ್ಕೆ ಬಂದು ಹನುಮನ ದರ್ಶನ ಪಡೆದಿದ್ದಾರೆ. ಚಿಕ್ಕ ಮಕ್ಕಳೊಂದಿಗೆ ಆಗಮಿಸಿದ್ದ ಮಹಿಳೆಯರು 575 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲಿರುವ ಹನುಮನ ದರ್ಶನ ಪಡೆದರು.
BIGG NEWS: ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಕನ್ನಡ ಹುಡುಗಿ ಜತೆ ಲವ್ವಿಡಲ್ವಿ
ಇನ್ನು ಅಂಜನಾದ್ರಿ ಬೆಟ್ಟಕ್ಕೆ ವಿದೇಶಿಗರು ಆಗಮಿಸಿದ್ದಾರೆ. 575 ಮೆಟ್ಟಿಲು ಇರುವ ಅಂಜನಾದ್ರಿ ಬೆಟ್ಟವನ್ನು ಹತ್ತಿ ಆಂಜನೇಯನ ದರ್ಶನ ಪಡೆದು ಪುನೀತ್ರಾಗಿದ್ದಾರೆ. ನೂರಾರು ವಿದೇಶಿಗರಿಂದ ಶ್ರೀರಾಮ ಜೈರಾಮ ಜಯಜಯ ರಾಮ ಎಂದು ಜಪ ಮಾಡುತ್ತಿದ್ದಾರೆ. ಆಂಜನೇಯನ ದರ್ಶನ ಪಡೆದು ಸುಮಾರು ಅರ್ಧಗಂಟೆಗಳ ಕಾಲ ಜಪ ಮಾಡಿದ್ದಾರೆ.