ಬೆಂಗಳೂರು: ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ವಿರುದ್ದ ಗಂಭೀರ ಆರೋಪ ಕೇಳಿ ಬರುತ್ತಿದ್ದು, ಕಾಂತಾರ ಸಿನಿಮಾದಲ್ಲಿನ ಎರಡು ಹಾಡುಗಳು ಈಗ ವಿವಾದಕ್ಕೆ ಕಾರಣವಾಗಿದ್ದು, ಮಲಯಾಳ ಮತ್ತು ಮರಾಠಿಯಿಂದ ಹಾಡುಗಳನ್ನು ಎತ್ತಿ ಕೊಂಡುತಮ್ಮದೇ ಎನ್ನುವಂತೆ ಬಿಲ್ಡಪ್ ಕೊಡುತ್ತಿದ್ದಾರೆ ಅಂಥ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುತ್ತಿದ್ದಾರೆ.
ಮಲೆಯಾಳಂ ಸಿನಿಮಾವೊಂದರ ನವರಸಂ ಹಾಡಿನ ಸ್ವರೂಪವನ್ನು ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಹಾಡನ್ನು ಹೋಲಿಕೆ ಮಾಡಿ ಅಜನೀಶ್ ಲೋಕನಾಥ್ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೇ 2014ರಲ್ಲಿ ಬಿಡುಗಡೆಗೊಂಡ ‘ನಟರಂಗ್’ ಮರಾಠಿ ಚಿತ್ರದ ಅಪ್ಸರ ಅಲಿ ಹಾಡನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಟ್ಯೂನ್ಗೆ ಹೋಲಿಕೆ ಮಾಡುತ್ತಿದ್ದಾರೆ.
ಅಂದ ಹಾಗೇ ಈ ಹಿಂದೆ ಕೂಡ ಅಜನೀಶ್ ಲೋಕನಾಥ್ ವಿರುದ್ದ ರವಿಚಂದ್ರನ್ ಅಭಿನಯದ ಸಿನಿಮಾವೊಂದರ ಹಾಡನ್ನು ಅನುಮತಿ ಇಲ್ಲದೇ ಬಳಕೆ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು, ಸಂಬಂಧಪಟ್ಟ ಆಡಿಯೋ ಕಂಪನಿ ಕೂಡ ಈ ಬಗ್ಗೆ ಕೋರ್ಟ್ನಲ್ಲಿ ಕೇಸ್ ದಾಖಲು ಮಾಡಿತ್ತು, ಪ್ರಾರಂಭದಲ್ಲಿ ಇಲ್ಲವೆಂದು ವಾದಿಸಿದ್ದ ಚಿತ್ರತಂಡ, ಸುಮಾರು 5 ವರ್ಷಗಳ ಪ್ರಕರಣ ಇತ್ಯಾರ್ಥವಾದ ಬಗ್ಗೆ ಹೇಳಿಕೊಂಡಿತು.