ದುಬೈ: ಬಾಂಗ್ಲಾದೇಶದ ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ಮುಶ್ಫಿಕರ್ ರಹೀಮ್(Mushfiqur Rahim) ಇಂದು ಬೆಳಗ್ಗೆ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ರಹೀಮ್ ಈ ಬಗ್ಗೆ ಟ್ವಿಟರ್ನಲ್ಲಿ ಘೋಷಣೆ ಮಾಡಿದ್ದು, ʻಏಕದಿನ ಮತ್ತು ಟೆಸ್ಟ್ ಕ್ರಿಕೆಟ್ಗೆ ಹೆಚ್ಚಿನ ಒತ್ತು ನೀಡುವುದು ಈ ಕ್ರಮದ ಹಿಂದಿನ ಕಾರಣʼ ಎಂದು ಅವರ ಟ್ವೀಟ್ ಹೇಳಿದೆ.
“ನಾನು T20 ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಲು ಬಯಸುತ್ತೇನೆ ಮತ್ತು ಆಟದ ಟೆಸ್ಟ್ ಮತ್ತು ODI ಸ್ವರೂಪಗಳ ಮೇಲೆ ಕೇಂದ್ರೀಕರಿಸಲು ಬಯಸುತ್ತೇನೆ. ಅವಕಾಶ ಬಂದಾಗ ಫ್ರಾಂಚೈಸ್ ಲೀಗ್ಗಳನ್ನು ಆಡಲು ನಾನು ಲಭ್ಯವಿರುತ್ತೇನೆ. ಎರಡು ಸ್ವರೂಪಗಳಲ್ಲಿ ನನ್ನ ರಾಷ್ಟ್ರವನ್ನು ಹೆಮ್ಮೆಯಿಂದ ಪ್ರತಿನಿಧಿಸಲು ಎದುರು ನೋಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
I would like to announce my retirement from T20 INTERNATIONALS and focus on Test and ODI formats of the game. I will be available to play franchise leagues when the opportunity arrives. Looking forward to proudly represent my nation in the two formats-MR15
— Mushfiqur Rahim (@mushfiqur15) September 4, 2022
6 ವರ್ಷಗಳ ರಿಲೇಷನ್ಶಿಪ್: ಬಾಂಗ್ಲಾದೇಶದ ಮಹಿಳೆಯನ್ನು ವರಿಸಿದ ತಮಿಳುನಾಡ ಯುವತಿ!