ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಮತ್ತು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮುರುಘಾ ಶ್ರೀಗಳ ವಿರುದ್ಧ ಷಡ್ಯಂತ್ರ ಆಡಿಯೋ ರಿಲೀಸ್ ಆಗಿದೆ. ಈ ಆಡಿಯೋ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಿತ್ರದುರ್ಗದ ಗ್ರಾಮೀಣ ಠಾಣೆಗೆ ಬಸವಪ್ರಭು ಶ್ರೀಗಳು ದೂರು ನೀಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮುರುಘಾ ಶ್ರೀಗಳ ಆಡಿಯೋವೊಂದು ರಿಲೀಸ್ ಆಗಿದೆ.
ಹೌದು, ಮುರುಘಾ ಮಠದ ಶರಣರ ವಿರುದ್ಧ ದೂರು ನೀಡುವಂತೆ ವ್ಯಕ್ತಿಯೊಬ್ಬ ಮಠದ ಹಾಸ್ಟೆಲ್ ನಲ್ಲಿ ಅಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳಿಗೆ ಕರೆ ಮಾಡಿ ಮುರುಘಾ ಶ್ರೀಗಳ ವಿರುದ್ಧ ದೂರು ನೀಡುವಂತೆ ಮಾತನಾಡಿದ್ದ ಆಡಿಯೋ ವೈರಲ್ ಆಗಿದೆ, ಈ ಆಡಿಯೋ 14 ನಿಮಿಷ 15 ಸೆಕೆಂಡ್ ನದ್ದಾಗಿದ್ದು, ಸುಳ್ಳು ಹೇಳುವಂತೆಬಾಲಕಿಗೆ ಪ್ರಚೋದನೆ ಮಾಡಿ ಸಹಾಯ ಮಾಡುವುದಾಗಿ ಆಮಿಷ ಒಡ್ಡಿದ್ದಾನೆ ಎನ್ನಲಾಗಿದೆ.
ಆಡಿಯೋದಲ್ಲಿ ಏನಿದೆ..?
“ ನೋಡು ನೀನು ಈಗ ಮುರುಘಾ ಶ್ರೀಗಳ ಮೇಲೆ ದೂರು ದಾಖಲಿಸಬೇಕು, ನಿನ್ನ ಮೇಲೂ ಕೂಡ ದೌರ್ಜನ್ಯ ನಡೆದಿದೆ ಎಂದು ದೂರು ನೀಡು ಎಂದು ಹೇಳಿದ್ದಾನೆ. ಅದಕ್ಕೆ ಬಾಲಕಿ ನಾನು ಯಾಕೆ ದೂರು ಕೊಡಬೇಕು ಎಂದು ಪ್ರಶ್ನಿಸಿದ್ದಾಳೆ. ಆಗ ಆ ವ್ಯಕ್ತಿ ನೀನು ನಿನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ಕೊಡುವುದು ಬೇಡ, ಶ್ರೀಗಳು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು, ಮೈ ಮುಟ್ಟುತ್ತಿದ್ದರು ಎಂದು ದೂರು ಕೊಟ್ಟರೆ ಸಾಕು ಅಷ್ಟು ಹೇಳಲು ನಿನಗೇನು ಎಂದು ಹೇಳಿದ್ದಾನೆ ಎನ್ನಲಾಗಿದೆ. ಅಷ್ಟು ಹೇಳಿದ್ರೆ ಸಾಕು ನಿನ್ನ ಜೀವನ ಉದ್ದಾರ ಆಗುತ್ತದೆ , ನಿನಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾನೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಇನ್ನೂ ಘಟನೆಯ ಸತ್ಯಾನುಸತ್ಯತೆ ಕುರಿತು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ಇನ್ನು ಚಿತ್ರದುರ್ಗದ ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆಯಾಗಿದೆ. ಚಿತ್ರದುರ್ಗ ಜಿಲ್ಲಾ ಸೆಷನ್ಸ್ ಕೋರ್ಟ್ ನವೆಂಬರ್ 14 ವರೆಗೆ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ನವೆಂಬರ್ 3 ರಂದು ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿಯನ್ನು ನ.8ರವರೆಗೆ ವಿಸ್ತರಿಸಲಾಗಿತ್ತು. ಮಂಗಳವಾರ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪೊಲೀಸರು ಚಿತ್ರದುರ್ಗ ಮುರುಘಾ ಶ್ರೀಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಬಳಿಕ ಮತ್ತೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ. ಸದ್ಯ ಶ್ರೀಗಳ ವಿರುದ್ದ ಎರಡು ಪೋಸ್ಕ್ ಪ್ರಕರಣದ ದಾಖಲಾಗಿದೆ. ಪ್ರಕರಣ ಸಂಬಂಧ ಚಾರ್ಚ್ ಶೀಟ್ಗಳನ್ನು ಸಹ ಸಲ್ಲಿಸಲಾಗಿದೆ.
BIGG NEWS : ಮಣ್ಣಲ್ಲಿ ಮಣ್ಣಾದ ಸ್ಯಾಂಡಲ್ ವುಡ್ ಹಿರಿಯ ನಟ ‘ಲೋಹಿತಾಶ್ವ’ |Actor Lohithasva