ಚಿತ್ರದುರ್ಗ : ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಮತ್ತು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಇದೀಗ ಪೋಕ್ಸೋ ಜೊತೆ ಅಟ್ರಾಸಿಟಿ ಪ್ರಕರಣದ ಕಂಟಕವೂ ಕೂಡ ಎದುರಾಗಿದೆ ಎನ್ನಲಾಗಿದೆ.
ಹೌದು, ಮುರುಘಾ ಶ್ರೀ ಪ್ರಕರಣದ ಚಾರ್ಜ್ ಶೀಟ್ ನಲ್ಲಿ , ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬಳು ಪರಿಶಿಷ್ಟ ಜಾತಿಗೆ ಸೇರಿದವಳು ಎಂಬುದು ಬಯಲಾಗಿದೆ.
ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬಳು ಪರಿಶಿಷ್ಟ ಜಾತಿಗೆ ಸೇರಿದವಳಾಗಿರುವುದರಿಂದ ಮುರುಘಾ ಶರಣರ ಮೇಲೆ ಹೆಚ್ಚುವರಿ ಕಲಂ ಅಳವಡಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ತಡೆ ಪ್ರತಿಬಂಧಕ ಅಧಿನಿಯಮ ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಮೂಲಕ ಮುರುಘಾ ಶ್ರೀಗಳಿಗೆ ಪೋಕ್ಸೋ ಜೊತೆ ಅಟ್ರಾಸಿಟಿ ಪ್ರಕರಣದ ಕಂಟಕವೂ ಕೂಡ ಎದುರಾಗಿದೆ ಎನ್ನಲಾಗಿದೆ.
ಮುರುಘಾ ಪೋಕ್ಸೋ ಕೇಸ್ ಗೆ ಬಿಗ್ ಟ್ವಿಸ್ಟ್
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಮತ್ತು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮುರುಘಾ ಶ್ರೀಗಳ ವಿರುದ್ಧ ಷಡ್ಯಂತ್ರಆಡಿಯೋ ರಿಲೀಸ್ ಆಗಿದೆ. ಈ ಆಡಿಯೋ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಿತ್ರದುರ್ಗದ ಗ್ರಾಮೀಣ ಠಾಣೆಗೆ ಬಸವಪ್ರಭು ಶ್ರೀಗಳು ದೂರು ನೀಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮುರುಘಾ ಶ್ರೀಗಳ ಆಡಿಯೋವೊಂದು ರಿಲೀಸ್ ಆಗಿದೆ.
ಹೌದು, ಮುರುಘಾ ಮಠದ ಶರಣರ ವಿರುದ್ಧ ದೂರು ನೀಡುವಂತೆ ವ್ಯಕ್ತಿಯೊಬ್ಬ ಮಠದ ಹಾಸ್ಟೆಲ್ ನಲ್ಲಿ ಅಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳಿಗೆ ಕರೆ ಮಾಡಿ ಮುರುಘಾ ಶ್ರೀಗಳ ವಿರುದ್ಧ ದೂರು ನೀಡುವಂತೆ ಮಾತನಾಡಿದ್ದ ಆಡಿಯೋ ವೈರಲ್ ಆಗಿದೆ, ಈ ಆಡಿಯೋ 14 ನಿಮಿಷ 15 ಸೆಕೆಂಡ್ ನದ್ದಾಗಿದ್ದು, ಸುಳ್ಳು ಹೇಳುವಂತೆಬಾಲಕಿಗೆ ಪ್ರಚೋದನೆ ಮಾಡಿ ಸಹಾಯ ಮಾಡುವುದಾಗಿ ಆಮಿಷ ಒಡ್ಡಿದ್ದಾನೆ ಎನ್ನಲಾಗಿದೆ.
ಆಡಿಯೋದಲ್ಲಿ ಏನಿದೆ..?
“ ನೋಡು ನೀನು ಈಗ ಮುರುಘಾ ಶ್ರೀಗಳ ಮೇಲೆ ದೂರು ದಾಖಲಿಸಬೇಕು, ನಿನ್ನ ಮೇಲೂ ಕೂಡ ದೌರ್ಜನ್ಯ ನಡೆದಿದೆ ಎಂದು ದೂರು ನೀಡು ಎಂದು ಹೇಳಿದ್ದಾನೆ. ಅದಕ್ಕೆ ಬಾಲಕಿ ನಾನು ಯಾಕೆ ದೂರು ಕೊಡಬೇಕು ಎಂದು ಪ್ರಶ್ನಿಸಿದ್ದಾಳೆ. ಆಗ ಆ ವ್ಯಕ್ತಿ ನೀನು ನಿನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ಕೊಡುವುದು ಬೇಡ, ಶ್ರೀಗಳು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು, ಮೈ ಮುಟ್ಟುತ್ತಿದ್ದರು ಎಂದು ದೂರು ಕೊಟ್ಟರೆ ಸಾಕು ಅಷ್ಟು ಹೇಳಲು ನಿನಗೇನು ಎಂದು ಹೇಳಿದ್ದಾನೆ ಎನ್ನಲಾಗಿದೆ. ಅಷ್ಟು ಹೇಳಿದ್ರೆ ಸಾಕು ನಿನ್ನ ಜೀವನ ಉದ್ದಾರ ಆಗುತ್ತದೆ , ನಿನಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾನೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಇನ್ನೂ ಘಟನೆಯ ಸತ್ಯಾನುಸತ್ಯತೆ ಕುರಿತು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
BREAKING NEWS : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ‘ಟಿಪ್ಪು ಜಯಂತಿ’ ಸೇರಿ ಎಲ್ಲಾ ಆಚರಣೆಗೂ ಅನುಮತಿ ನೀಡಿದ ಪಾಲಿಕೆ
‘ಸಾವಿನಲ್ಲೂ ರಾಜಕಾರಣ ಮಾಡ್ತೇನೆ ಎನ್ನುವವರು ವಿಕೃತ ಮನಸ್ಸಿನವರು ; ಶಾಸಕ ರೇಣುಕಾಚಾರ್ಯ |M.P Renukacharya