ಚಿತ್ರದುರ್ಗ: ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಚಿತ್ರದುರ್ಗ ಮಠದ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿಯನ್ನು ನ.25 ರವರೆಗೆ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಈ ಬಗ್ಗೆ ಚಿತ್ರದುರ್ಗದ 2 ನೇ ಹೆಚ್ಚುವರಿ ಕೋರ್ಟ್ ಆದೇಶ ಹೊರಡಿಸಿದ್ದು, ಪ್ರಕರಣದ ಎ.1 ಆರೋಪಿಯಾಗಿರುವ ಮುರುಘಾ ಶ್ರೀ ನ್ಯಾಯಾಂಗ ಬಂಧನದ ಅವಧಿಯನ್ನು ನ.25 ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಇಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಮುರುಘಾ ಶ್ರೀಯನ್ನು ವಿಚಾರಣೆಗೆ ಹಾಜರುಪಡಿಸಲಾಗಿತ್ತು.
ಅದೇ ರೀತಿ ಇನ್ನುಳಿದ ಪ್ರಕರಣದ ಆರೋಪಿಗಳಾಗಿರುವ ವಾರ್ಡನ್ ರಶ್ಮಿ,ಹಾಗೂ ಪರಮಶಿವಯ್ಯಗೆ ಕೂಡ ನ.25 ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಎ1 ಆರೋಪಿ ಮುರುಘಾ ಶ್ರೀ, ಎ2 ವಾರ್ಡನ್ ರಶ್ಮಿ, ಎ3 ಮಠದ ಮ್ಯಾನೇಜರ್ ಪರಮಶಿವಯ್ಯಗೆ ನವೆಂಬರ್ 25ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಇನ್ನೂ, ಮುರುಘಾ ಶರಣರು, ಪರಮಶಿವಯ್ಯ ಚಿತ್ರದುರ್ಗ ಜೈಲಿನಲ್ಲಿದ್ದಾರೆ. ಇನ್ನು ಎ2 ಆರೋಪಿ ಹಾಸ್ಟೆಲ್ ವಾರ್ಡನ್ ರಶ್ಮಿ ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿದ್ದಾರೆ.
ಮುರುಘಾ ಶ್ರೀ ವಿರುದ್ಧ ಮತ್ತೊಂದು ಆರೋಪ
ಮುರುಘಾ ಶ್ರೀಗಳು ಪೋಸ್ಕೋ ಕೇಸ್ ನಲ್ಲಿ ಜೈಲು ಪಾಲಾಗಿದ್ದಾರೆ. ಇದಕ್ಕೂ ಮುನ್ನ ಪ್ರಕರಣ ಹೊರ ಬರುತ್ತಿದ್ದಂತೆ ಸಂತ್ರಸ್ತೆಯ ತಂದೆ, ಚಿಕ್ಕಪ್ಪನಿಗೆ ಹಣ ಕೊಟ್ಟು ಕೇಸ್ ಮುಚ್ಚಾಕೋದಕ್ಕೆ ಪ್ರಯತ್ನಿಸಿದಂತ ಗಂಭೀರ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಒಡನಾಡಿ ಸಂಸ್ಥೆ ದೂರು ನೀಡಲಾಗಿದೆ. ಚಿತ್ರದುರ್ಗದ ಮಕ್ಕಳ ರಕ್ಷಣಾ ಸಮಿತಿ ಸುಪರ್ದಿಯಲ್ಲಿದಾಗ ಸ್ವಾಮೀಜಿ ನಮಗೆ ಹಣ ಕೊಟ್ಟಿದ್ದಾರೆ, ದೂರು ನೀಡುವುದು ಬೇಡ ಎಂಬುದಾಗಿ ಮಕ್ಕಳು ದೂರವಾಣೆ ಕರೆ ಮಾಡಿದಂತ ಪೋಷಕರಿಗೆ ತಿಳಿಸಿರೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೋಸ್ಕೋ ಕೇಸ್ ಪ್ರಕರಣ ಸಂಬಂಧ ಸಂತ್ರಸ್ತೆ ತಂದೆ, ಚಿಕ್ಕಪ್ಪನಿಗೆ ಹಣ ಕೊಟ್ಟಿರುವ ಬಗ್ಗೆ ದೂರು ನೀಡಲಾಗಿದೆ. ಹಣ ಕೊಟ್ಟ ಹಿನ್ನಲೆಯಲ್ಲಿ ಮುರುಘಾ ಶ್ರೀಗಳ ವಿರುದ್ಧ ದೂರು ನೀಡುವುದು ಬೇಡ ಎನ್ನುವಂತ ಮಾತುಕತೆ ಕೂಡ ನಡೆದಿರೋದಾಗಿ ಮೈಸೂರಿನ ಒಡನಾಡಿ ಸಂಸ್ಥೆ ನೀಡಿರುವಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.