ಚಿತ್ರದುರ್ಗ : ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ , ಮುರುಘಾ ಶ್ರೀ ವಿರುದ್ಧ ದೂರು ನೀಡುವಂತೆ ಬಾಲಕಿಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಶಿಕ್ಷಕನನ್ನು ಬಂಧಿಸಲಾಗಿದೆ.
ಸಂತ್ರಸ್ತ ಬಾಲಕಿಗೆ ಮುರುಘಾ ಶ್ರೀ ವಿರುದ್ಧ ದೂರು ನೀಡುವಂತೆ ಪ್ರಚೋದಿಸಿದ ಆಡಿಯೋ ವೈರಲ್ ಆಗಿತ್ತು, ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಚಿತ್ರದುರ್ಗ ಪೊಲೀಸರು ಎಸ್ ಜೆ ಎಂ ವಿದ್ಯಾಪೀಠದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಅಥಣಿ ಮೂಲದ ಬಸವರಾಜೇಂದ್ರನನ್ನು ಗುರುವಾರ ಬಂಧಿಸಿದ್ದಾರೆ
ಇನ್ನೂ, ಮುರುಘಾ ಶ್ರೀ ಲೈಂಗಿಕ ಕಿರುಕುಳದ ಬಗ್ಗೆ ಮಠದ ಅಡುಗೆ ಭಟ್ಟ ಕರಿ ಬಸ್ಸಪ್ಪ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಬೆಚ್ಚಿ ಬೀಳಿಸುವ ಮಾಹಿತಿ ರಿವೀಲ್ ಮಾಡಿದ್ದಾರೆ.ವಾರ್ಡನ್ ರಶ್ಮಿ ಮತ್ತು ಮಕ್ಕಳು ಮುರುಘಾ ಶ್ರೀ ರೂಮಿಗೆ ಹೋದಾಗ ನನ್ನನ್ನು ಬಿಟ್ಟುಕೊಳ್ಳುತ್ತಿರಲಿಲ್ಲ, ಸುಮಾರು ಗಂಟೆ ನಂತರ ಹೊರಕ್ಕೆ ಬರುತ್ತಿದ್ದರು, ಹಾಸ್ಟೆಲ್ ಬಾಲಕಿಯರನ್ನು ಸ್ವಾಮೀಜಿ ರೂಮಿಗೆ ಕರೆಸಿಕೊಳ್ಳುತ್ತಾರೆ ಎಂದು ಮಠಕ್ಕೆ ಬರುವ ಜನರು ಮಾತನಾಡುತ್ತಿದ್ದರು, , ನಮಗೂ ಹಲವು ಬಾರಿ ಅನುಮಾನ ಬಂದಿದೆ. ಬಟ್ಟೆಯಲ್ಲಿ ಕಲೆ ಉಳಿಯದಂತೆ ತೊಳೆಯಿರಿ ಎಂದು ಕೆಲಸಗಾರರಿಗೆ ಮುರುಘಾ ಶ್ರೀ ಹೇಳುತ್ತದ್ದರು ಎಂದು ಅಡುಗೆ ಭಟ್ಟ ಕರಿಬಸಪ್ಪ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ, ಈ ಬಗ್ಗೆ ಆಫೀಸ್ ಬಾಯ್ ಪ್ರಜ್ವಲ್ ಹೇಳಿಕೆ ನೀಡಿದ್ದು, ಕೆಲಸ ಇದೆ ಎಂದು ಸ್ವಾಮೀಜಿ ಬೆಡ್ ರೂಂಗೆ ಬಾಲಕಿಯರನ್ನು ಕರೆಸಿಕೊಳ್ಳುತ್ತಿದ್ದರು. ಈ ವಿಚಾರ ನನಗೆ ಗೊತ್ತಿದೆ ಆದರೆ ರೂಮಿನಲ್ಲಿ ಏನು ನಡೆಯಿತು ಎಂಬುದು ಮಾತ್ರ ಗೊತ್ತಿಲ್ಲ ಎಂದು ಪ್ರಜ್ವಲ್ ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಇನ್ನೂ, ಚಿತ್ರದುರ್ಗದ ಮುರುಘಾ ಮಠದಲ್ಲಿ ಕೇವಲ ಮುರುಘಾ ಶರಣರು ಮಾತ್ರವಲ್ಲ ಅವರ ಕೆಳ ಹಂತದವರು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ಪರಶುರಾಮ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ. ಶರಣರು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡ ಮೇಲೆ ಅವರ ಕೆಳ ಹಂತದಲ್ಲಿ ಗುರು ಸ್ಥಾನದಲ್ಲಿರೋ ವ್ಯಕ್ತಿಯೂ ಮಕ್ಕಳನ್ನು ತಮ್ಮ ಕಾಮಕ್ಕೆ ಬಳಸಿದ್ದಾರೆ. ಆ ವ್ಯಕ್ತಿಯನ್ನು ಬುದ್ದಿ ಎಂದು ಕರೆಯಲಾಗುತ್ತೆ. ಅವರ ನಂತರ, ಮಠದ ಕೆಲವು ನೌಕರರು, ಅಧಿಕಾರಿಗಳು ಕೂಡ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
BIG NEWS: UPI ಮೂಲಕ ಭಾರತ-ಸಿಂಗಪುರ ನಡುವೆ ಹಣ ವರ್ಗಾವಣೆ ಶೀಘ್ರದಲ್ಲೇ ಪ್ರಾರಂಭ: ಭಾರತೀಯ ರಾಯಭಾರಿ
Astrology: ದೈವಜ್ಞ ಪಂಡಿತ ಗಣಪತಿ ಭಟ್ ಗುರೂಜಿಯಿಂದ ‘ಇಂದಿನ ರಾಶಿಭವಿಷ್ಯ’