ಚಿತ್ರದುರ್ಗ : ಜಿಪಿಎ ಪಡೆದು ಮುರುಘಾ ಮಠದ ಹಣ, ಆಸ್ತಿ ದುರ್ಬಳಕೆ ಆರೋಪ ಹಿನ್ನೆಲೆ ಮುರುಘಾಮಠದ ಆಡಳಿತಾಧಿಕಾರಿ ಆಗಿದ್ದ ಮಾಜಿ ಶಾಸಕ ಎಸ್ಕೆ ಬಸವರಾಜನ್ ವಿರುದ್ಧದ ಕೇಸ್ನ ಸಾಕ್ಷ್ಯ ವಿಚಾರಣೆ ಮಾಡಲಾಗಿದ್ದು, ಪ್ರಕರಣದಲ್ಕಿ 12 ನೇ ಸಾಕ್ಷಿಯಾಗಿ ಮುರುಘಾಶ್ರೀ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ.
ಹೊಳಲಕೆರೆಯ ಕುಡಿನೀರುಕಟ್ಟೆ ಬಳಿ 2007ರಲ್ಲಿ ಮಠದ ಹಣದಿಂದ ಜಮೀನು ಖರೀದಿಸಿ ತನ್ನ ಹೆಸರಿಗೆ ಕ್ರಯಪತ್ರ ಮಾಡಿಕೊಂಡಿದ್ದಾರೆ. ಮಠದ ಹಣದಿಂದ ಎಸ್.ಕೆ.ಬಸವರಾಜನ್ ಹೆಸರಿಗೆ ಆಸ್ತಿ ಖರೀದಿಸಿದ್ದಾರೆ. ಆಸ್ತಿ ಖರೀದಿಸುವಾಗ ತಮಗೆ ತಿಳಿಸಿರಲಿಲ್ಲವೆಂದು ಮುರುಘಾಶ್ರೀ ಹೇಳಿಕೆ ನೀಡಿದ್ದಾರೆ.
ಆಸ್ತಿ ಮಾರಲು ಜಿಲ್ಲಾ ನ್ಯಾಯಾಲಯದ ಅನುಮತಿ ಪಡೆಯದ ವಿಚಾರವಾಗಿ ಹೇಳಿಕೆ ನೀಡಿದ್ದು, ಅನುಮತಿ ಪಡೆದಿರಬಹುದು, ಇಲ್ಲದಿರಬಹುದು ಎಂದು ಮುರುಘಾಶ್ರೀ ಉತ್ತರ ನೀಡಿದ್ದಾರೆ. ಹರಿಹರದ 11 ಎಕರೆ 1 ಕೋಟಿ 10 ಲಕ್ಷಕ್ಕೆ ಮಾರಿದ್ದು ನಿಜ. ಕೋರ್ಟ್ ಅನುಮತಿ ಪಡೆಯದೇ ಮಾರಿದ್ದಾಗಿ ದಾವೆ ಹಾಕಿದ್ದಾರೆ. ಇತ್ತೀಚಿಗೆ ಹೈಕೋರ್ಟ್ ಆದೇಶದಂತೆ ಮಠದ ವ್ಯವಹಾರ ನೋಡಿಕೊಳ್ಳುತ್ತಿಲ್ಲ ಎಂದಿದ್ದಾರೆ.
ಮಠಕ್ಕೆ ಮೋಸ ಗೊತ್ತಾದಾಗ ಕ್ರಮ ಕೈಗೊಳ್ಳಲು ಕೋರಿದ್ದೆ. ಕ್ರಯಪತ್ರ, ದಾನಪತ್ರಗಳ ಮೂಲಕ ಭಕ್ತರಿಂದ ಆಸ್ತಿ ಪಡೆದುಕೊಂಡಿರುತ್ತೇನೆ. ಆಸ್ತಿಯನ್ನು ಮಠದ ಪೂಜೆ ಕೈಂಕರ್ಯಗಳಿಗೆ ಉಪಯೋಗಿಸಬೇಕು. ದಾನ ಪಡೆದ ಆಸ್ತಿಯನ್ನು ಕೋಟ್ಯಾಂತರ ರೂ.ಗೆ ಮಾರಿರುವುದು ನಿಜ. ಪೀಠಾಧಿಕಾರಿಯಾಗಿ ಆಸ್ತಿ ಮಾರಿ ಅಭಿವೃದ್ದಿಗೆ ಬಳಸುವ ಅಧಿಕಾರವಿತ್ತು. ಮಠ ಹಿಂದೆ ಪಬ್ಲಿಕ್ ಟ್ರಸ್ಟ್ ಆಗಿದ್ದ ಬಗ್ಗೆ ಮಾಹಿತಿ ಇಲ್ಲ. ನ್ಯಾಯಾಲಯಗಳಲ್ಲಿ ತಾವೇ ಟ್ರಸ್ಟ್ ಬಗ್ಗೆ ಸಾಕ್ಷಿ ನೀಡಿರುವ ನೆನಪಿಲ್ಲ ಎಂದು ಹೇಳಿದ್ದಾರೆ.