ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳು ಜೈಲು ಸೇರಿದ ನಂತರ ಮಠದಲ್ಲಿ ಹಲವು ಬದಲಾವಣೆ ಆಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಹಾಗಿದ್ದಲ್ಲಿ ಮಠದ ಆಡಳಿತದ ಭವಿಷ್ಯ ರಾಜ್ಯ ಸರ್ಕಾರ ಕೈಯಲಿ ಇದಿಯಾ ಎಂಬ ಹಲವು ಅನುಮಾನಗಳು ಮೂಡಿದೆ.
BREAKING NEWS : ತುಮಕೂರಿನ ಸಿದ್ದಗಂಗಾಮಠದಿಂದ ವಿದ್ಯಾರ್ಥಿ ನಾಪತ್ತೆ!
ಮಠಕ್ಕೆ ನೂತನ ಆಡಳಿತಾಧಿಕಾರಿ ನೇಮಿಸುವಂತೆ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಮಠದ ಬಗ್ಗೆ ವರದಿ ಕೇಳಿತ್ತು. ಇದೀಗ ವರದಿ ಕೈ ಸೇರಿದ ಬಳಿಕ ನ್ಯಾಯಸಮ್ಮತ ತೀರ್ಮಾನ ತೆಗೆದುಕೊಳ್ಳುವುದಾಗಿ ಹೊಸದುರ್ಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದೀಗ ಜಿಲ್ಲಾಧಿಕಾರಿ ಜಿ.ಆರ್. ಜೆ ದಿವ್ಯ ಪ್ರಭು ೭೦ ಪುಟಗಳ ಸಂಪೂರ್ಣ ವರದಿ ಸಿದ್ಧಪಡಿಸಿದ್ದು, ಇದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕೈ ಸೇರಿದೆ.
BREAKING NEWS : ತುಮಕೂರಿನ ಸಿದ್ದಗಂಗಾಮಠದಿಂದ ವಿದ್ಯಾರ್ಥಿ ನಾಪತ್ತೆ!
ಮುರುಘಾ ಮಠದ ಟ್ರಸ್ಟ್ ಆಡಳಿತ, ಎಸ್ ಜೆಎಂ ವಿದ್ಯಾಪೀಠ ಆಡಳಿತ ಹಾಗೂ ವಿದ್ಯಾಪೀಠ ಅಧೀನದಲ್ಲಿ ಇರುವ ಶಿಕ್ಷಣ ಸಂಸ್ಥೆಗಳ ಹಾಗೂ ನೌಕರರ ನಿರ್ವಹಣೆ , ನಿರ್ವಹಣೆ, ಹಣಕಾಸು , ವಹಿವಾಟು, ಮಠದ ಆಸ್ತಿ, ಬಸವವೇಶ್ವರ ಮೆಡಿಕಲ್ ಕಾಲೇಜು , ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವು ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ.