ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ತಡ ರಾತ್ರಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿ ಶೀಟರ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಮಂಡ್ಯದ ಜನತೆ ಬೆಚ್ಚಿಬಿದ್ದಿದ್ದಾರೆ.
ಪಾಂಡವಪುರ ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮದ ಧನು ಅಲಿಯಾಸ್ ಧನಂಜಯ್ ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ.ಮೇಲುಕೋಟೆ ಪೋಲೀಸ್ ಠಾಣಾ ವ್ಯಾಪ್ತಿಯ ನೀಲನಹಳ್ಳಿ ಗೇಟ್ ಬಳಿ ತಡರಾತ್ರಿ ಘಟನೆ ನಡೆದದ್ದು, ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೆ ಲಾಂಗ್ ಗಳು ಜಳಪಳಿಸಿವೆ.
ಗುರುವಾರ ರಾತ್ರಿ ಧನಂಜಯ್ ಡಾಬಾದಲ್ಲಿ ಊಟ ಮುಗಿಸಿ ಮನೆಗೆ ತೆರಳುತ್ತಿದ್ದ ಅವರನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಕುತ್ತಿಗೆ, ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇನ್ನು ತೀವ್ರವಾದ ಗಾಯದಿಂದ ನಲುಗಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಧನಂಜಯ್ ಕೆಲ ಆರೋಪಗಳ ಮೇಲೆ ರೌಡಿಶೀಟರ್ ಆಗಿ ಜೈಲಿಗೆ ಸೇರಿದ್ದರು. ಇತ್ತಿಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಘಟನೆಗೆ ಹಳೇ ವೈಷಮ್ಯವೇ ಕಾರಣ ಎಂದು ಪೋಲೀಸರು ಅಂದಾಜಿದ್ದು, ಮೇಲುಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
BREAKING NEWS: ಮುಂಬೈ ಹೋಟೆಲ್ನಲ್ಲಿ 30 ವರ್ಷದ ಮಾಡೆಲ್ ಆತ್ಮಹತ್ಯೆಗೆ ಶರಣು | Model Found Hanging
ಹಬ್ಬ..ಸಿಕ್ಕಿದ್ದೇ ಚಾನ್ಸ್..! ಎಂದು ದುಪ್ಪಟ್ಟು ವಸೂಲಿ ಮಾಡುತ್ತಿದ್ದ ಖಾಸಗಿ ಬಸ್ ಗಳಿಗೆ ಬಿಗ್ ಶಾಕ್ ನೀಡಿದ ‘RTO’