ಕೋಲಾರ : ಕೋಲಾರದಲ್ಲಿ ಮಹಿಳೆಯ ಹಿಂದೆ ಬಿದ್ದ ವ್ಯಕ್ತಿಯೊಬ್ಬ ತನ್ನ ಪ್ರೀತಿ ಒಪ್ಪದಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ, ಕೋಲಾರದ ಹೊರವಲಯದ ಬಂಗಾರಪೇಟೆ ರಸ್ತೆಯಲ್ಲಿ ಈ ಕೊಲೆ ನಡೆದಿದೆ. ಚಾಕುವಿನಿಂದ ಇರಿದು ಸುಜಾತ (27) ಎನ್ನುವ ಮಹಿಳೆಯನ್ನು ಚಿರಂಜೀವಿ ಎಂಬ ಆರೋಪಿ ಕೊಲೆ ಮಾಡಿದ್ದಾನೆ.
ಕೊಲೆಯಾದ ಸುಜಾತ ಬಂಗಾರಪೇಟೆ ತಾಲೂಕಿನ ದಾಸರ ಹೊಸಹಳ್ಳಿ ಗ್ರಾಮದಿ ನಿವಾಸಿ ಎಂದು ತಿಳಿದುಬಂದಿದೆ. ಸುಜಾತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಇನ್ನು ಆರೋಪಿ ಚಿರಂಜೀವಿ ಹೊಸಪೇಟೆ ಇಂಡಸ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ಸ್ಥಳೀಯರು ಆರೋಪಿ ಚಿರಂಜೀವಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸುಜಾತ ಮದುವೆಯಾಗಿ ಗಂಡನಿಂದ ದೂರವಾಗಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಳು. ಇಂಡಸ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಚಿರಂಜೀವಿ ಸಾಲ ವಸೂಲಿ ಮಾಡಲು ತೆರಳಿದಾಗ ಸುಜಾತಾಳ ಪರಿಚಯವಾಗಿದೆ. ಈ ವೇಳೆ ನನ್ನನ್ನು ಪ್ರೀತಿಸುವಂತೆ ಚಿರಂಜೀವಿ ಸುಜಾತ ಬೆನ್ನು ಬಿದ್ದಿದ್ದಾನೆ. ಹಿತ ಚಿರಂಜೀವಿ ಕೂಡ ಮದುವೆಯಾಗಿ ಬರು ಮಕ್ಕಳಿದ್ದಾರೆ. ಸುಜಾತ ತನ್ನ ಪ್ರೀತಿಯ ಒಪ್ಪದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೋಲಾರ ನಗರ ಪೊಲೀಸ್ ಠಾಣೆ ಎಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








