ಬಾಗಲಕೋಟೆ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ, ಎರಡು ಕುಟುಂಬಗಳ ನಡುವೆ ಮಾರಮಾರಿ ನಡೆದಿದೆ. ಈ ವೇಳೆ ಯುವಕನೋರ್ವನನ್ನು ರಾಡ್ ಇಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೆಳಕಿ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ರಾಡ್ನಿಂದ ಹೊಡೆದು ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ವಿಶ್ವನಾಥ್ ಹನುಮಂತಪ್ಪ (26) ಯುವಕನನ್ನ ಭೀಕರವಾಗಿ ಕೊಲೆ ಮಾಡಲಾಗಿದೆ. ಲಿಂಗಾಪುರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ. ಹೊಲದಿಂದ ಬರುವ ವೇಳೆ ವಿಶ್ವನಾಥ್ನನ್ನು ಅಡ್ಗಟ್ಟಿ ರಾಡ್ ನಿಂದ ಸಂಬಂಧಿಕರೇ ಹಲ್ಲೆ ಮಾಡಿದ್ದಾರೆ. ಅಕ್ಟೋಬರ್ 16 ರಂದು ವಿಶ್ವನಾಥ್ ಮೇಲೆ ಹಲ್ಲೆ ನಡೆದಿದೆ ರಾಡ್ ನಿಂದ ಆರು ಮಂದಿ ಹಲ್ಲೆ ಮಾಡಿದ್ದಾರೆ.
ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಎರಡು ಕುಟುಂಬಗಳ ನಡುವೆ ಮಾರಮಾರಿ ನಡೆದಿದೆ. ಗಲಾಟೆಯಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾನೆ. ಗಣೇಶ್ ಮರೆಮ್ಮನವರ, ಪ್ರಕಾಶ, ರಂಗಪ್ಪ, ಕುಮಾರ, ಯಲ್ಲಪ್ಪ ಬಸಪ್ಪ ಮತ್ತು ಯಂಕಪ್ಪ ಎಂಬುವವರು ವಿಶ್ವನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಜಮೀನಿನಿಂದ ಮನೆಗೆ ತೆರುಳುವಾಗ ಅಡ್ಡಗಟ್ಟಿನಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಬಳಿಕ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ವಿಶ್ವನಾಥ್ ಸಾವನಪ್ಪಿದ್ದಾನೆ.