ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಅತ್ಯಂತ ಕುತೂಹಲ ಮೂಡಿಸುವಂತಹ ಕ್ಷೇತ್ರವಾಗಿದೆ ಏಕೆಂದರೆ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಡಾ. ಸಿಎನ್ ಮಂಜುನಾಥ್ ಅವರು ಕಣಕ್ಕಿಳಿದಿದ್ದಾರೆ. ಇದೀಗ ಡಿಕೆ ಬ್ರದರ್ಸ್ ವಿರುದ್ಧ ಆರ್ ಆರ್ ನಗರ ಶಾಸಕ ಮುನಿರತ್ನ ಅವರು ಗಂಭೀರವಾದ ಆರೋಪ ಮಾಡಿದ್ದು ಕ್ಷೇತ್ರದಲ್ಲಿ ಬೆದರಿಸುವ ಕಾರ್ಯ ನಡೀತಾ ಇದೆ ಎಂದು ಆರೋಪಿಸಿದ್ದಾರೆ.
BREAKING: ಬೆಂಗಳೂರಲ್ಲಿ RSS ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ಆಕ್ಷೇಪ: ಸ್ಥಳದಲ್ಲಿ ಬಿಗುವಿನ ವಾತಾವರಣ
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ನಿರತ್ನ ಗಂಭೀರವಾದ ಆರೋಪ ಮಾಡಿದ್ದು, ಇಬ್ಬರು ದ್ವಾರಪಾಲಕರಿಂದ ಇದೆಲ್ಲವೂ ನಡಿತಾ ಇದೆ. ಕನಕಪುರದಲ್ಲಿ ಇದು ಹುಟ್ಟಿದ್ದು ಎಲ್ಲಿಗೂ ಬಂದು ಬಿಟ್ಟಿದೆ. ಪರೋಕ್ಷವಾಗಿ ಡಿಕೆ ಬ್ರದರ್ಸ್ ವಿರುದ್ಧ ಶಾಸಕ ಮುನಿರತ್ನ ಕಿಡಿ ಕಾರಿದ್ದಾರೆ. ಇದು ಹುಟ್ಟಿದ್ದು ಮೊದಲು ಕನಪುರಕದಲ್ಲಿ ಅದು ಈಗ ಹುಡುಕಿಕೊಂಡು ಆರ್ ಆರ್ ನಗರಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ರಾತ್ರೋರಾತ್ರಿ ಮನೆಗಳಿಗೆ ನುಗ್ಗಿಸುವುದು. ಬೆದರಿಕೆ ಹಾಕುವುದು ಊರು ಬಿಟ್ಟು ಹೋಗುವಂತಹ ಹೇಳುವುದು. ಇವೆಲ್ಲ ಪ್ರತಿದಿನ ನಡೀತಾನೆ ಇದೆ. ಬಿಜೆಪಿಯ ಬಾವುಟ ಯಾರ್ ಹಿಡಿತಾರೆ ಅಂತವರ ಫೋಟೋಗಳನ್ನು ಸಂಬಂಧಪಟ್ಟ ಪೊಲೀಸ್ ಸ್ಟೇಷನ್ ಗೆ ಕಳಿಸುವುದು.ಅವರನ್ನು ಹಿಡಿದುಕೊಂಡು ಬರುವುದು ಇದೆಲ್ಲ ಇಂದಿಗೂ ನಡಿತಾ ಇದೆ.ಎಲ್ಲಿವರ್ಗು ನಡೆಯುತ್ತೆ ನಡೆಯಲಿ. 26ನೇ ತಾರೀಕಿನವರೆಗೂ ನಡೆಯುತ್ತೆ. 26ರ ಫಲಿತಾಂಶದವರೆಗೆ ನಡೆಯುತ್ತೆ ಎಂದು ತಿಳಿಸಿದರು.
ಧಾರವಾಡದ ಲೋಕಸಭಾ ಚುನಾವಣೆಯಲ್ಲಿ ‘ಫಿಕ್ಸಿಂಗ್’ ಆಗಿದೆ : ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಆರೋಪ
5,000 ಕಾರ್ಡ್ ಕೊಟ್ಟು ಮತದಾರರಿಗೆ ಅವರು ಆಮಿಷ ಒಡ್ಡಲಾಗಿದೆ ಎಂದು ಆರೋಪಿಸಿದರು. ಹಳೆ ಚಾಳಿಯನ್ನ ಈ ಕ್ಷೇತ್ರದಲ್ಲಿ ಮುಂದುವರೆಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾರ್ಡ್ ಕೊಟ್ಟು ಗೆದ್ದರು, ರಾಮನಗರದಲ್ಲಿ ಕಾರ್ಡ್ ಕೊಟ್ಟು ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದರು.ತಾತ್ಕಾಲಿಕವಾಗಿ 5 ಸಾವಿರ ರೂಪಾಯಿಗಳನ್ನು ಕಾರ್ಡ್ ಕೊಟ್ಟು ಐದು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದ್ದಾರೆ. ಮಾಗಡಿಲಿ 5000 ಕಾರ್ಡು ಕೊಟ್ಟು ಮಾಗಡಿ ಮಂಜಣ್ಣ ಸೋಲಿಸುತ್ತಾರೆ. ಆನೇಕಲ್ ನಲ್ಲಿ ಕೂಡ ಕಾರ್ಡ್ ಕೊಟ್ಟು ಅಲ್ಲಿನೂ ಸೋಲ್ಲಿಸುತ್ತಾರೆ ಎಂದು ಆರೋಪಿಸಿದರು.
ಹೊಸ ಫಾರ್ಮುಲಾ
ಚುನಾವಣೆ ಗೆಲ್ಲೋದಕ್ಕೆ ಹೊಸ ಫಾರ್ಮುಲಾ ಬಳಕೆಯಾಗ್ತಾ ಇದೆ ಎಂದು ಇದೆ ವೇಳೆ ಮುನಿರತ್ನ ಆರೋಪಿಸಿದರು. ಸಣ್ಣ ಮಷಿನ್ ಇಟ್ಕೊಂಡು ಮನೆಗೆ ಹೋಗುತ್ತಾರೆ. ಮಷಿನ್ ಅಲ್ಲಿ ಬಂದ ಒಂದು ಸ್ಲೀಪ್ ಅನ್ನು ಮನೆ ಅವರಿಗೆ ಕೊಡುತ್ತಾರೆ. ಇನ್ನೊಂದು ಅವರ ಮೊಬೈಲ್ ಸಂಖ್ಯೆಗೆ ಹೋಗುತ್ತದೆ ಆ ನಂಬರ್ ಇವರ ಕಂಟ್ರೋಲ್ ರೂಮ್ಗೆ ಹೋಗುತ್ತದೆ.ಸೇವ್ ಆದಂತಹ ನಂಬರ್ ಸ್ಥಳೀಯ ನಾಯಕರಿಗೆ ಸಿಗುತ್ತದೆ.ಸ್ಥಳೀಯ ನಾಯಕರು ಮನೆ ಬಳಿ ಹೋಗಿ ಸ್ಲಿಪ್ ಕೇಳುತ್ತಾರೆಂದು ಮುನಿರತ್ನ ಅವರು ಆರೋಪ ಮಾಡಿದರು.