ಮುಂಬೈ: ದೀಪಾವಳಿ ಹಬ್ಬಕ್ಕೆಂದು ಮೊಬೈಲ್ನಲ್ಲಿ ಸಿಹಿತಿಂಡಿ ಆರ್ಡರ್ ಮಾಡುವ ವೇಳೆ ಆನ್ಲೈನ್ ವಂಚನೆಯಿಂದ 49 ವರ್ಷದ ಮಹಿಳೆಯೊಬ್ಬರು ₹ 2.4 ಲಕ್ಷ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಉಪನಗರ ಅಂಧೇರಿ ನಿವಾಸಿ ಪೂಜಾ ಶಾ ಅವರು ಭಾನುವಾರ ಆಹಾರ ವಿತರಣಾ ಅಪ್ಲಿಕೇಶನ್ನಲ್ಲಿ ಸಿಹಿತಿಂಡಿಗಳನ್ನು ಆರ್ಡರ್ ಮಾಡಿ ಆನ್ಲೈನ್ನಲ್ಲಿ ₹ 1,000 ಪಾವತಿಸಲು ಪ್ರಯತ್ನಿಸಿದರು. ಆದರೆ, ವಹಿವಾಟು ವಿಫಲವಾಗಿದೆ. ಈ ವೇಳೆ ಆಕೆ ಆನ್ಲೈನ್ನಲ್ಲಿ ಸ್ವೀಟ್ ಅಂಗಡಿಯ ಸಂಖ್ಯೆಯನ್ನು ಕಂಡುಕೊಂಡು ಕರೆ ಮಾಡಲು ಯತ್ನಿಸಿದ್ದಾಳೆ. ಈ ವೇಳೆ ಆಕೆಗೆ ವ್ಯಕ್ತಿಯೊಬ್ಬರು ಕರೆ ಮಾಡಿದ್ದು, ಆಕೆಯ ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತು ಫೋನ್ನಲ್ಲಿ ಸ್ವೀಕರಿಸಿದ OTP ಅನ್ನು ಕೇಳಿದ್ದಾರೆ. ಆಗ ಮಹಿಳೆ ಕಾರ್ಡ್ ವಿವರಗಳು ಮತ್ತು ಒಟಿಪಿಯನ್ನು ಹಂಚಿಕೊಂಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಆಕೆಯ ಖಾತೆಯಿಂದ 2,40,310ರೂ. ಹಣ ಕಟ್ ಆಗಿದೆ.
ನಂತ್ರ, ಮಹಿಳೆ ಓಶಿವಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರ ತ್ವರಿತ ಕ್ರಮದಿಂದ ಹಣವನ್ನು ಮರುಪಡೆಯಲು ಯಶಸ್ವಿಯಾಗಿದ್ದಾರೆ.
BIGG NEWS : ಮಹಾರಾಷ್ಟ್ರದಲ್ಲಿ ಕೊರೊನಾ ಹೊಸ ತಳಿ ಪತ್ತೆ : ಕರ್ನಾಟಕದಲ್ಲಿ ‘ಹೈ ಅಲರ್ಟ್’
BIG NEWS : ದೀಪಾವಳಿ ನಂತ್ರ ಚೆನ್ನೈನಲ್ಲಿ ʻಕಳಪೆಯಾದ ಗಾಳಿಯ ಗುಣಮಟ್ಟʼ: 300 ಕ್ಕೂ ಹೆಚ್ಚು ಪ್ರಕರಣ ದಾಖಲು
BIGG NEWS : ಕರ್ನಾಟಕದ ಎರಡು ಕಡೆ ‘ಮಲ್ಲಿಕಾರ್ಜುನ ಖರ್ಗೆ ಬೃಹತ್ ಅಭಿನಂದನಾ ಸಮಾವೇಶ’ |Mallikarjuna Kharge
BIGG NEWS : ಮಹಾರಾಷ್ಟ್ರದಲ್ಲಿ ಕೊರೊನಾ ಹೊಸ ತಳಿ ಪತ್ತೆ : ಕರ್ನಾಟಕದಲ್ಲಿ ‘ಹೈ ಅಲರ್ಟ್’