ಮುಂಬೈ: ಐಕಾನಿಕ್ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ ಸೇರಿದಂತೆ ಮುಂಬೈನ ಹಲವಾರು ವಸ್ತುಸಂಗ್ರಹಾಲಯಗಳಿಗೆ ಬಾಂಬ್ ಸ್ಫೋಟಗಳ ಕುರಿತು ಎಚ್ಚರಿಕೆಯ ಇಮೇಲ್ಗಳು ಬಂದಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಕೊಲಾಬಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ ಮತ್ತು ವರ್ಲಿಯಲ್ಲಿರುವ ನೆಹರು ವಿಜ್ಞಾನ ಕೇಂದ್ರ ಸೇರಿದಂತೆ ಪ್ರಮುಖ ವಸ್ತುಸಂಗ್ರಹಾಲಯಗಳಿಗೆ ಬೆದರಿಕೆ ಮೇಲ್ಗಳನ್ನು ಕಳುಹಿಸಲಾಗಿದೆ.
ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳವು ಇಮೇಲ್ಗಳನ್ನು ಸ್ವೀಕರಿಸಿದ ವಸ್ತುಸಂಗ್ರಹಾಲಯಗಳನ್ನು ತನಿಖೆ ಮಾಡಿದೆ. ಆದರೆ, ಯಾವುದೇ ಸ್ಫೋಟಕಗಳ ಕುರುಹು ಪತ್ತೆಯಾಗಿಲ್ಲ ಎಂದು ಅವರು ಹೇಳಿದರು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳೆಉ ತಿಳಿಸಿದ್ದಾರೆ.
BREAKING: ಅಸ್ಸಾಂನ ಮೋರಿಗಾಂವ್ನಲ್ಲಿ 3.1 ತೀವ್ರತೆಯ ಭೂಕಂಪ | Earthquake in Assam
BREAKING: ಅಸ್ಸಾಂನ ಮೋರಿಗಾಂವ್ನಲ್ಲಿ 3.1 ತೀವ್ರತೆಯ ಭೂಕಂಪ | Earthquake in Assam