ಮುಂಬೈ: ಮಹಿಳೆ ಮತ್ತು ಆಕೆಯ ಪ್ರಿಯಕರನೊಬ್ಬ ಮಹಿಳೆಯ ಪತಿಗೆ ಸ್ಲೋ ಪಾಯ್ಸನ್ ನೀಡಿ ಕೊಂದಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
ಸಂಚು ಮತ್ತು ಕೊಲೆ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನು ಡಿಸೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಪೊಲೀಸರ ಪ್ರಕಾರ, ಕವಿತಾ ಎಂಬ ಮಹಿಳೆ ಕೆಲವು ವರ್ಷಗಳ ಹಿಂದೆ ತನ್ನ ಪತಿ ಕಮಲ್ಕಾಂತ್ನಿಂದ ಬೇರ್ಪಟ್ಟಿದ್ದರು. ಆದರೆ, ನಂತರ ತಮ್ಮ ಮಗುವಿನ ಭವಿಷ್ಯಕ್ಕಾಗಿ ಸಾಂತಾಕ್ರೂಜ್ನಲ್ಲಿರುವ ಅವರ ತವರು ಮನೆಗೆ ತೆರಳಿದ್ದರು. ಇದೇ ವೇಳೆ ಕಮಲ್ಕಾಂತ್ ಅವರ ತಾಯಿ ಹೊಟ್ಟೆಯ ಕಾಯಿಲೆಯಿಂದ ಹಠಾತ್ತನೆ ಸಾವನ್ನಪ್ಪಿದ್ದಾರೆ. ಕೆಲವು ತಿಂಗಳ ನಂತರ, ಕಮಲಕಾಂತ್ಗೂ ಹೊಟ್ಟೆ ನೋವು ಕಾಣಿಸಿಕೊಂಡು ಅವರ ಆರೋಗ್ಯವು ಹದಗೆಟ್ಟಿತು. ವೈದ್ಯಕೀಯ ಪರೀಕ್ಷೆಗಳಲ್ಲಿ ಕಮಲ್ಕಾಂತ್ ಅವರ ರಕ್ತದಲ್ಲಿ ಆರ್ಸೆನಿಕ್ ಮತ್ತು ಥಾಲಿಯಮ್ನ ಹೆಚ್ಚಿನ ಮಟ್ಟ ಕಂಡುಬಂದಿದೆ. ಇದು ಮಾನವನ ರಕ್ತದಲ್ಲಿ ಕಂಡುಬರುವ ಅಸಾಮಾನ್ಯ ಲೋಹೀಯ ವಸ್ತುಗಳು ಎಂದು ವೈದ್ಯರು ಹೇಳಿದ್ದಾರೆ.
ಕಮಲ್ಕಾಂತ್ ಅವರು ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನವೆಂಬರ್ 19 ರಂದು ನಿಧನರಾದರು. ಪೊಲೀಸರು ಆರಂಭದಲ್ಲಿ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದರು. ಆದರೆ, ಸಂಚು ಶಂಕಿಸಿ, ತನಿಖೆಗಾಗಿ ಮುಂಬೈ ಪೊಲೀಸರ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಯಿತು ಮತ್ತು ಕವಿತಾ ಮತ್ತು ಆಕೆಯ ಪ್ರಿಯಕರ ಹಿತೇಶ್ ಅವರನ್ನು ಬಂಧಿಸಲಾಯಿತು.
ಇನ್ಸ್ಪೆಕ್ಟರ್ ಸಂಜಯ್ ಖತಾಲೆ ಪ್ರಕಾರ, ಕಮಲ್ಕಾಂತ್ ವೈದ್ಯಕೀಯ ವರದಿ, ಆತನ ಪತ್ನಿ ಸೇರಿದಂತೆ ಆತನ ಕುಟುಂಬ ಸದಸ್ಯರ ಹೇಳಿಕೆ ಹಾಗೂ ಕಮಲ್ಕಾಂತ್ ಆಹಾರ ಕ್ರಮಕ್ಕೆ ಸಂಬಂಧಿಸಿದ ಮಾಹಿತಿಯು ಕೊಲೆಯ ಸಂಚು ಮತ್ತು ಉದ್ದೇಶವನ್ನು ಬಹಿರಂಗಪಡಿಸಲು ಸಹಾಯ ಮಾಡಿದೆ. ಆರೋಪಿ ಕವಿತಾ ತನ್ನ ಪ್ರಿಯಕರ ಹಿತೇಶ್ ಜೊತೆ ಸೇರಿ ಕಮಲ್ಕಾಂತ್ ಅವರನ್ನು ಸಾಯಿಸುವ ಉದ್ದೇಶದಿಂದ ಅವರ ಆಹಾರದಲ್ಲಿ ಕ್ರಮೇಣ ವಿಷ ಬೆರೆಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಕಮಲ್ಕಾಂತ್ ಅವರ ಅನಾರೋಗ್ಯದ ಲಕ್ಷಣಗಳು ಕಮಲ್ಕಾಂತ್ ತಾಯಿಗೂ ಕೂಡ ಕಾಣಿಸಿಕೊಂಡು ಸಾವನ್ನಪ್ಪಿದ್ದರು. ಹೀಗಾಗಿ, ತಾಯಿಗೂ ಕೂಡ ವಿಷ ನೀಡಿದ್ದಾರೆಯೇ ಎಂದು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ಕಮಲ್ಕಾಂತ್ ಮತ್ತು ಕವಿತಾ ಅವರ ಪ್ರೇಮಿ ಹಿತೇಶ್ ಜೈನ್ ಬಾಲ್ಯದ ಸ್ನೇಹಿತರಾಗಿದ್ದು, ಇಬ್ಬರೂ ವ್ಯಾಪಾರ ಕುಟುಂಬದಿಂದ ಬಂದವರಾಗಿದ್ದರು.
BIGG NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಶೀಘ್ರವೇ ರಾಜ್ಯಾಧ್ಯಂತ ‘ನಮ್ಮ ಕ್ಲಿನಿಕ್’ ಯೋಜನೆಗೆ ಚಾಲನೆ
BIG NEWS : ಭಾರತೀಯ ಕಾರ್ಮಿಕನ ಕುಟುಂಬದ ಸದಸ್ಯರೂ ಕೂಡ ಈಗ ಕೆನಡಾದಲ್ಲಿ ಕೆಲಸ ಮಾಡಲು ಅರ್ಹರು: ವರದಿ
BIGG NEWS : ದತ್ತಪೀಠಕ್ಕೆ ಇಬ್ಬರು ‘ಹಿಂದೂ ಅರ್ಚಕ’ರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ
BIG NEWS : ಭಾರತೀಯ ಕಾರ್ಮಿಕನ ಕುಟುಂಬದ ಸದಸ್ಯರೂ ಕೂಡ ಈಗ ಕೆನಡಾದಲ್ಲಿ ಕೆಲಸ ಮಾಡಲು ಅರ್ಹರು: ವರದಿ