ಕೆಎನ್ಎನ್ ಡಿಜಿಟಲ್ ಡೆಸ್ಕ್ : ʻಜೀವನದಲ್ಲಿ ಏನಾದ್ರೂ ಸಾಧನೆ ಮಾಡಿದ್ರೆ ಮಾತ್ರ ಮತ್ತೆ ಮನೆಗೆ ಹೋಗೋದುʼ ಎಂದು ಈ ಹಿಂದೆ ಮಾಧ್ಯಮಗಳಿಗೆ ಹೇಳಿದ್ದ ಕ್ರಿಕೆಟರ್ ಇದೀಗ ತಮ್ಮ ಕುಟುಂಬವನ್ನು ಬರೋಬ್ಬರಿ 9 ವರ್ಷಗಳ ನಂತ್ರ ಭೇಟಿಯಾಗಿದ್ದಾರೆ.
ಹೌದು, ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಕುಮಾರ್ ಕಾರ್ತಿಕೇಯ ಸಿಂಗ್(Kumar Kartikeya Singh )ತಮ್ಮ ಕುಟುಂಬವನ್ನು 9 ವರ್ಷಗಳ ನಂತ್ರ ಭೇಟಿಯಾಗಿದ್ದು, ತನ್ನ ಅಮ್ಮನೊಂದಿಗೆ ತೆಗೆಸಿಕೊಂಡ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ “9 ವರ್ಷ 3 ತಿಂಗಳ ನಂತರ ನನ್ನ ಕುಟುಂಬ ಮತ್ತು ಅಮ್ಮನನ್ನು ಭೇಟಿಯಾದೆ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ” ಎಂದು ಶೀರ್ಷಿಕೆಯಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ.
Met my family and mumma ❤️ after 9 years 3 months . Unable to express my feelings 🤐#MumbaiIndians #IPL2022 pic.twitter.com/OX4bnuXlcw
— Kartikeya Singh (@Imkartikeya26) August 3, 2022
ಕಾರ್ತಿಕೇಯ ಅವರ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಕೂಡ ಅದೇ ಚಿತ್ರವನ್ನು ಹಂಚಿಕೊಂಡಿದೆ.
BIGG BREAKING NEWS: ದೇಶದಲ್ಲಿ ಮತ್ತೆ ಏರಿಕೆ ಕಂಡ ಕೊರೊನಾ; ಕಳೆದ 24 ಗಂಟೆಗಳಲ್ಲಿ 19,893 ಹೊಸ ಪ್ರಕರಣಗಳು ಪತ್ತೆ
BIGG NEWS: ಅಪ್ಪು ನೆನಪಿಗಾಗಿ ನಾಳೆಯಿಂದ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ..! ವಿವಿಧ ಆಕೃತಿಯ ಹೂವುಗಳಿಂದ ಸಿಂಗಾರ