ಮುಂಬೈ: ದಕ್ಷಿಣ ಮುಂಬೈನ ಶಾಪಿಂಗ್ ಅವೆನ್ಯೂ ಫ್ಯಾಶನ್ ಸ್ಟ್ರೀಟ್ನಲ್ಲಿ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, ಸಂಭವಿಸಿದ್ದು 12 ಕ್ಕೂ ಹೆಚ್ಚು ಅಂಗಡಿಗಳು ಸುಟ್ಟುಹೋಗಿವೆ. ಘಟನೆಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೇತನ ಸಮಸ್ಯೆಗೆ ಬೇಸತ್ತು ಕೋಲಾರದಲ್ಲಿ’108 Ambulance’ ಚಾಲಕ ಆತ್ಮಹತ್ಯೆಗೆ ಯತ್ನ
ಮುಂಬೈ ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಫ್ಯಾಶನ್ ಸ್ಟ್ರೀಟ್ನಲ್ಲಿನ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು 1 ನೇ ಹಂತವಾಗಿದೆ.
ಘಟನಾ ಸ್ಥಳಕ್ಕೆ ಮುಂಬೈ ಅಗ್ನಿಶಾಮಕ ದಳದ ಅಧಿಕಾರಿಗಳು ಆಗಮಿಸಿದ್ದು, ಬೆಂಕಿ ನಂದಿಸು ಕಾರ್ಯ ನಡೆಸುತ್ತಿದ್ದಾರೆ. ಇದರ ಜೊತೆಗೆ ಪೊಲೀಸ್ ಮತ್ತು ಇತರ ಸಂಬಂಧಿತ ಸಿಬ್ಬಂದಿ ಸ್ಥಳದಲ್ಲಿದ್ದಾರೆ.
#WATCH | Maharashtra: Fire broke out at 10-12 shops at Fashion Street in Mumbai today. It has now been extinguished. No casualties/injuries reported. pic.twitter.com/IboH8OMEkI
— ANI (@ANI) November 5, 2022
ಸ್ಥಳದಲ್ಲಿ ಪರಿಸ್ಥಿತಿ ಸರಯಾಗುವವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಮುಂಬೈ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ಯಾಶನ್ ಸ್ಟ್ರೀಟ್ ಬಟ್ಟೆಗಳನ್ನು ಖರೀದಿಸಲು ಜನಪ್ರಿಯ ಮಾರುಕಟ್ಟೆಯಾಗಿದೆ ಮತ್ತು ಇದು ನಗರದ ಪ್ರಮುಖ ಪ್ರವಾಸಿ ತಾಣಗಳಿಗೆ ಬಹಳ ಹತ್ತಿರದಲ್ಲಿದೆ.