ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (CSMIA) ಅದರ ಎರಡೂ ರನ್ವೇಗಳಲ್ಲಿ ವಾರ್ಷಿಕ ದುರಸ್ತಿ ಮತ್ತು ನವೀಕರಣ ಕಾರ್ಯದ ನಡೆಯುವುದರಿಂದ ಇಂದು (ಮಂಗಳವಾರ) ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಬಂದ್ ಮಾಡಲಾಗುವುದು.
ʻ14/32 & 9/27 ಎರಡೂ ರನ್ವೇಗಳಲ್ಲಿ ದುರಸ್ತಿ ಮತ್ತು ನಿರ್ವಹಣೆ ಕೆಲಸ ನಡೆಯುವುದರಿಂದ ಮಂಗಳವಾರ (ಅಕ್ಟೋಬರ್ 18) ಬೆಳಗ್ಗೆ 11.00 ರಿಂದ ಸಂಜೆ 5 ಗಂಟೆಗಳವರೆಗೆ ವಿಮಾನ ನಿಲ್ದಾಣ ಬಂದ್ ಇರಲಿದೆ. ಪ್ರಯಾಣಿಕರಿಗೆ ಅನಾನುಕೂಲತೆಯಿಂದ ತಪ್ಪಿಸಲು ಅಕ್ಟೋಬರ್ 18ರ ವಿಮಾನ ವೇಳಾಪಟ್ಟಿಯನ್ನು ಆಯಾ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸುವಂತೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೋಮವಾರ ತಿಳಿಸಿದೆ.
As part of our post-monsoon preventive maintenance of runway intersection, we at #MumbaiAirport have planned a runway closure on Tuesday, 18th October, 2022, from 1100 hrs to 1700 hrs.#PassengerAdvisory #GatewayToGoodness pic.twitter.com/wIC9bCkEkH
— CSMIA (@CSMIA_Official) October 17, 2022
ಈ ವಿಮಾನ ನಿಲ್ದಾಣದಲ್ಲಿ ಪ್ರತಿದಿನ 800 ಕ್ಕೂ ಹೆಚ್ಚು ವಿಮಾನಗಳು ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆಗುತ್ತವೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರನ್ವೇ ದುರಸ್ತಿ ಮತ್ತು ನವೀಕರಣ ಕಾರ್ಯ ನಡೆಸಲಾಗುತ್ತಿದೆ. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು ಎಂದು ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
BIGG NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : 50 ಲಕ್ಷ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ