ಮುಂಬೈ: ಮುಂಬೈನ ಮನ್ಖುರ್ದ್ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಶುಕ್ರವಾರ 16 ವರ್ಷದ ಬಾಲಕಿ ಕಣ್ಣಾಮುಚ್ಚಾಲೆ ಆಡುತ್ತಿದ್ದಾಗ ಸಾವನ್ನಪ್ಪಿದ್ದಾಳೆ.
ಮೃತಳನ್ನು ರೇಷ್ಮಾ ಖಾರವಿ ಎಂದು ಗುರುತಿಸಲಾಗಿದೆ. ರೇಷ್ಮಾ ಆಕೆಯ ಸ್ನೇಹಿತರ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಸ್ನೇಹಿತರು ಲಿಫ್ಟ್ ಒಳಗೆ ಅಡಗಿ ಕುಳಿತಿರಬಹುದೆಂದು ಲಿಫ್ಟ್ನಲ್ಲಿದ್ದ ಚಿಕ್ಕ ಕಿಟಕಿಯ ಒಳಗೆ ತನ್ನ ತಲೆ ತೂರಿಸಿ ನೋಡುವಾಗ ಮೇಲಿಂದ ಲಿಫ್ಟ್ ಬಂದಿದೆ. ಈ ವೇಳೆ ಲಿಫ್ಟ್ ರೇಷ್ಮಾಳ ತಲೆಗೆ ಬಡಿದಿದ್ದು, ಆಕೆ ಅಲ್ಲೇ ಸಾವನ್ನಪ್ಪಿದ್ದಾಳೆ.
ಈ ಘಟನೆಯಿಂದ ನೊಂದಿರುವ ರೇಷ್ಮಾಳ ಕುಟುಂಬಸ್ಥರು ಹೌಸಿಂಗ್ ಸೊಸೈಟಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಪಘಾತ ತಪ್ಪಿಸಲು ಹೌಸಿಂಗ್ ಸೊಸೈಟಿ ಅಧಿಕಾರಿಗಳು ಕಿಟಕಿಗೆ ಗಾಜು ಅಳವಡಿಸಬೇಕು ಎಂದು ಮೃತರ ತಂದೆ ರವಿ ಖಾರವಿ ಹೇಳಿದ್ದಾರೆ.
ಈ ಸಂಬಂಧ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಹೌಸಿಂಗ್ ಸೊಸೈಟಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಖುರ್ದ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ಮಹಾದೇವ ಕೋಳಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಹೀನ ಕೃತ್ಯ : ಕಲಬುರಗಿಯಲ್ಲಿ ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಎಳೆದೊಯ್ದು ಅತ್ಯಾಚಾರ, ಕೊಲೆ
BIG NEWS: ಭಾರತ್ ಜೋಡೋ ಯಾತ್ರೆ: ʻರಾಹುಲ್ ಗಾಂಧಿʼ ಜೊತೆ ಹೆಜ್ಜೆ ಹಾಕಿದ ನಟಿ ʻಪೂಜಾ ಭಟ್ʼ | Bharat Jodo Yatra
ಭಾರತದ ಅರ್ಥ ವ್ಯವಸ್ಥೆ ದಿನೇ ದಿನೇ ಸುಧಾರಣೆಯಾಗುತ್ತಿದೆ: ಪ್ರಧಾನಿ ನರೇಂದ್ರ ಮೋದಿ
ರಾಜ್ಯದಲ್ಲಿ ಹೀನ ಕೃತ್ಯ : ಕಲಬುರಗಿಯಲ್ಲಿ ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಎಳೆದೊಯ್ದು ಅತ್ಯಾಚಾರ, ಕೊಲೆ