Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೋಳು ತಲೆ ಸಮಸ್ಯೆಗೆ ಮುಕ್ತಿ : ಕೇವಲ 56 ದಿನಗಳಲ್ಲಿ ಕೂದಲು ಬೆಳೆಸುವ ಅದ್ಭುತ `ಸೀರಂ’ ಕಂಡು ಹಿಡಿದ ವಿಜ್ಞಾನಿಗಳು.!

21/04/2026 10:15 AM

ಜರ್ಮನಿ ಗುರುದ್ವಾರದಲ್ಲಿ ಭೀಕರ ರಕ್ತಪಾತ: ಅಧಿಕಾರಕ್ಕಾಗಿ ಸಿಖ್ ಬಣಗಳ ನಡುವೆ ಮಾರಾಮಾರಿ; ಗುಂಡಿನ ಸದ್ದು,11 ಮಂದಿಗೆ ಗಾಯ!

21/04/2026 10:07 AM

BIG NEWS : ಬೆಳಗಾವಿಯಲ್ಲಿ ಭೀಕರ ಅಪಘಾತ : ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಗೂಡ್ಸ್‌ ಗಾಡಿ, ಇಬ್ಬರು ಸ್ಥಳದಲ್ಲೇ ಸಾವು!

21/04/2026 10:06 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸಾಗರದಲ್ಲಿ ಬಹುಕೋಟಿ ‘ಸೇಲ್ಸ್ ಸರ್ಟಿಫಿಕೇಟ್’ ಹಗರಣ: ತನಿಖೆಗೆ ಸಚಿವರಿಗೆ ‘ಶಾಸಕ ಗೋಪಾಕೃಷ್ಣ ಬೇಳೂರು’ ಪತ್ರ
KARNATAKA

BIG NEWS: ಸಾಗರದಲ್ಲಿ ಬಹುಕೋಟಿ ‘ಸೇಲ್ಸ್ ಸರ್ಟಿಫಿಕೇಟ್’ ಹಗರಣ: ತನಿಖೆಗೆ ಸಚಿವರಿಗೆ ‘ಶಾಸಕ ಗೋಪಾಕೃಷ್ಣ ಬೇಳೂರು’ ಪತ್ರ

By kannadanewsnow0903/04/2025 5:39 PM

ಶಿವಮೊಗ್ಗ: ಸಾಗರ ನಗರದಲ್ಲಿ ದಿನೇ ದಿನೇ ಸೇಲ್ಸ್ ಸರ್ಟಿಫಿಕೇಟ್ ಹಗರಣಗಳು ಹೆಚ್ಚಾಗುತ್ತಿವೆ. ಈ ಕಾರಣದಿಂದಲೇ ಸಾಗರ ನಗರದ ಕೋಟ್ಯಂತರ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗುತ್ತಿದೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ತಪ್ಪಿ ತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಪೌರಾಡಳಿತ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತಂತೆ ಹಜ್ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಉಪ ಲೋಕಾಯುಕ್ತರಿಗೆ ಪತ್ರ ಬರೆದಿರುವಂತ ಅವರು, ಸಾಗರ ನಗರಸಭೆಯ ಸೇಲ್ ದಿನದಿಂದ ದಿನಕ್ಕೆ ಸರ್ಟಿಫಿಕೇಟ್ ಹಾಗೂ ನಕಲಿ ಹಕ್ಕುಪತ್ರ ಪತ್ರದ ಹಗರಣ ಸುದ್ದಿಯಾಗುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಸರ್ಕಾರಿ ನಿವೇಶನಗಳನ್ನು ಹಾಗೂ ಜಾಗವನ್ನು ಸಂರಕ್ಷಣೆ ಮಾಡಬೇಕಿದ್ದ ಸರ್ಕಾರಿ ಅಧಿಕಾರಿಗಳ ಸೇಲ್ ಸರ್ಟಿಫಿಕೇಟ್‌ ಹೆಸರಿನಲ್ಲಿ ಕೋಟ್ಯಾಂತರ ಹಣದ ಹಗರಣ ಮಾಡಿರುವ ಬಗ್ಗೆ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿರುತ್ತದೆ ಎಂದಿದ್ದಾರೆ.

ಬಹಿರಂಗ ಹರಾಜು ನಿವೇಶನ ಸೇಲ್ ಸರ್ಟಿಫಿಕೇಟ್ ಎನ್ನುವ ಉಲ್ಲೇಖದೊಂದಿಗೆ ಯಾವುದೋ ಒಂದು ಇಸವಿ, ಯಾವುದೋ ದಿನಾಂಕವನ್ನು ನಮೂದು ಮಾಡಿ, ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನದ ಸರ್ಕಾರಿ ಮೌಲ್ಯವನ್ನು ಹಾಕಿ ನಗರಸಭೆಯಿಂದ ಉಪನೋಂದಣಿ ಇಲಾಖೆಯಲ್ಲಿ ಪೌರಾಯುಕ್ತರು ವಿಕ್ರಯಪತ್ರವನ್ನು ಬರೆದುಕೊಡುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.

ಉದಾಹರಣೆಗೆ ಹೇಳುವುದಾದರೆ ಸಾಗರ ನಗರದ ಯಾವುದೋ ಒಂದು ಬಡಾವಣೆಯಲ್ಲಿ ಸರ್ಕಾರಿ ನಿವೇಶನವಿದ್ದರೆ ಈ ನಿವೇಶನದ ನಂ ಹಾಗೂ ಖಾತೆ ನಂ. ನಮೂದಿಸಿ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಇವರ ಪತ್ರದ ಸಂಖ್ಯೆಯನ್ನು ಉಲ್ಲೇಖಿಸಿ ಒಂದು ದಿನಾಂಕವನ್ನು ನಮೂದು ಮಾಡಿ ಇದರಂತೆ ಸರ್ಕಾರಿ ನಿವೇಶನ ಬಹಿರಂಗ ಹರಾಜು ಹಾಕಿ ಎಂದು ನಿರ್ದೇಶಿಸಿದಂತೆ ಕಾನೂನುಬದ್ಧವಾಗಿ ನಿಯಮಾನುಸಾರ ಸಾರ್ವಜನಿಕವಾಗಿ ಬಹಿರಂಗ ಹರಾಜು ಮಾಡಲಾಗಿರುತ್ತದೆ ಎಂದು ನಗರಸಭೆ ಬರೆದುಕೊಟ್ಟ ಪತ್ರದಲ್ಲಿ ಹೇಳಿರುತ್ತಾರೆ. ಈ ರೀತಿಯಾಗಿ ಬಹಿರಂಗ ಹರಾಜು ಹಾಕಲಾಗಿದೆ ಎನ್ನುವುದೇ ದೊಡ್ಡ ಗೋಲ್ ಮಾಲ್ ವ್ಯವಹಾರವಾಗಿರುತ್ತದೆ ಎಂದಿದ್ದಾರೆ.

ನಿಯಾಮಾನುಸಾರ ಬಹಿರಂಗ ಹರಾಜು ಹಾಕಿ ಸರ್ಕಾರಿ ನಿವೇಶನ ಕೊಟ್ಟಿರುವುದು ಕೆಲವೇ ಕೆಲವು ನಿವೇಶನವಾದರೆ ಇದರ ಹೆಸರಿನಲ್ಲಿ ನಗರಸಭೆಯಿಂದ ಬರೆದುಕೊಟ್ಟು ಮಾರಾಟವಾದ ನಿವೇಶನಗಳು ನೂರಾರು ಆಗಿರುತ್ತವೆ. ಬಹು ಜಾಣ್ಮಯಿಂದ ಮೇಲ್ನೋಟಕ್ಕೆ ಕಾನೂನು ಬದ್ಧವಾಗಿ ಮಾಡಿದ್ದಾರೆ ಎನ್ನುವುದು ಪತ್ರದಲ್ಲಿ ಉಲ್ಲೇಖವಾಗಿರುತ್ತದೆ. ವಿನಃ ನಿಜರೂಪದಲ್ಲಿ ಯಾವುದೂ ಕಾನೂನು ಪಾಲನೆಯಾಗದೆ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಇವರ ಆದೇಶದ ಸಂಖ್ಯೆಯನ್ನು ಇಟ್ಟುಕೊಂಡು ಅದೆಷ್ಟೋ ಖಾಸಗಿ ವ್ಯಕ್ತಿಗಳಿಗೆ ಅಧಿಕಾರಿಗಳೇ ಸರ್ಕಾರಿ ನಿವೇಶನ ಮಾರಾಟ ಮಾಡಿ ಆರೋಪ. ಸಾರ್ವಜನಿಕರ ಹಣಗಳಿಸಿದ್ದಾರೆ ಎನ್ನವುದು ಸಾರ್ವಜನಿಕರು ಹೇಳುವ ಪಕಾರ ನಗರಸಭೆಯ ನಕಲಿ ಹಕ್ಕುಪತ್ರ ಹಾಗೂ ಸೇಲ್ ಸರ್ಟಿಫಿಕೇಟ್ ವ್ಯವಹಾರದ ದೊಡ್ಡ ಜಾಲ ನಗರದ ಎಲ್ಲಾ ವಾರ್ಡಿನಲ್ಲಿಯೂ ಆಗಿದೆ ಎಂದು ಹೇಳಿದ್ದಾರೆ.

ಅತೀ ಹೆಚ್ಚು ನಕಲಿ ಹಕ್ಕುಪತ್ರಗಳು ಜಂಬಗಾರು ವಾರ್ಡ್ ಹಾಗೂ ಅಣಲೇಕೊಪ್ಪ, ಶ್ರೀಧರ ನಗರ ಈ ಭಾಗದಲ್ಲಿ ಆಗಿದೆ. ಕಳೆದ 07 ವರ್ಷಗಳ ಅವಧಿಯಲ್ಲಿ ಈ ನಕಲಿ ದಾಖಲೆಯ ಬಹುಕೋಟಿ ವ್ಯವಹಾರದ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಕೈಗೊಂಡು ಈ ಹಗರಣದಲ್ಲಿ ಬಾಗಿಯಾದ ಖಾಸಗಿ ವ್ಯಕ್ತಿಗಳ ಹಾಗೂ ಈ ಅಕ್ರಮದಲ್ಲಿ ಬಾಗಿಯಾದ ಸಾಗರ ನಗರಸಭೆಯ ಸಿಬ್ಬಂಧಿ/ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BESCOM ಗ್ರಾಹಕರ ಗಮನಕ್ಕೆ: ಈ ‘ವಾಟ್ಸ್ ಆಪ್’ ಸಂಖ್ಯೆಗೆ ವಿದ್ಯುತ್ ಸಂಬಂಧಿತ ದೂರು ಸಲ್ಲಿಸಿ, ಕ್ಷಣದಲ್ಲೇ ಪರಿಹಾರ

`SSLC, PUC’ ಪಾಸಾದ ಯುವಕ/ಯುವತಿಯರಿಗೆ ಗುಡ್ ನ್ಯೂಸ್ : `PM ಇಂಟರ್ನ್ ಶಿಪ್ ಯೋಜನೆ’ಗೆ ಅರ್ಜಿ ಆಹ್ವಾನ

ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ | Waqf Amendment Bill

Share. Facebook Twitter LinkedIn WhatsApp Email

Related Posts

ಬೋಳು ತಲೆ ಸಮಸ್ಯೆಗೆ ಮುಕ್ತಿ : ಕೇವಲ 56 ದಿನಗಳಲ್ಲಿ ಕೂದಲು ಬೆಳೆಸುವ ಅದ್ಭುತ `ಸೀರಂ’ ಕಂಡು ಹಿಡಿದ ವಿಜ್ಞಾನಿಗಳು.!

21/04/2026 10:15 AM2 Mins Read

BIG NEWS : ಬೆಳಗಾವಿಯಲ್ಲಿ ಭೀಕರ ಅಪಘಾತ : ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಗೂಡ್ಸ್‌ ಗಾಡಿ, ಇಬ್ಬರು ಸ್ಥಳದಲ್ಲೇ ಸಾವು!

21/04/2026 10:06 AM1 Min Read

ಬೆಳಗಾವಿಯಲ್ಲಿ ಮನಕಲಕುವ ಘಟನೆ : ಹೆತ್ತ ತಾಯಿ ಸತ್ತರೂ, ಅಂತ್ಯಕ್ರಿಯೆಗೆ ಬಾರದೆ ನೀವೇ ನೆರವೇರಿಸಿ ಎಂದ ಪಾಪಿ ಮಕ್ಕಳು!

21/04/2026 10:05 AM1 Min Read
Recent News

ಬೋಳು ತಲೆ ಸಮಸ್ಯೆಗೆ ಮುಕ್ತಿ : ಕೇವಲ 56 ದಿನಗಳಲ್ಲಿ ಕೂದಲು ಬೆಳೆಸುವ ಅದ್ಭುತ `ಸೀರಂ’ ಕಂಡು ಹಿಡಿದ ವಿಜ್ಞಾನಿಗಳು.!

21/04/2026 10:15 AM

ಜರ್ಮನಿ ಗುರುದ್ವಾರದಲ್ಲಿ ಭೀಕರ ರಕ್ತಪಾತ: ಅಧಿಕಾರಕ್ಕಾಗಿ ಸಿಖ್ ಬಣಗಳ ನಡುವೆ ಮಾರಾಮಾರಿ; ಗುಂಡಿನ ಸದ್ದು,11 ಮಂದಿಗೆ ಗಾಯ!

21/04/2026 10:07 AM

BIG NEWS : ಬೆಳಗಾವಿಯಲ್ಲಿ ಭೀಕರ ಅಪಘಾತ : ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಗೂಡ್ಸ್‌ ಗಾಡಿ, ಇಬ್ಬರು ಸ್ಥಳದಲ್ಲೇ ಸಾವು!

21/04/2026 10:06 AM

ಬೆಳಗಾವಿಯಲ್ಲಿ ಮನಕಲಕುವ ಘಟನೆ : ಹೆತ್ತ ತಾಯಿ ಸತ್ತರೂ, ಅಂತ್ಯಕ್ರಿಯೆಗೆ ಬಾರದೆ ನೀವೇ ನೆರವೇರಿಸಿ ಎಂದ ಪಾಪಿ ಮಕ್ಕಳು!

21/04/2026 10:05 AM
State News
KARNATAKA

ಬೋಳು ತಲೆ ಸಮಸ್ಯೆಗೆ ಮುಕ್ತಿ : ಕೇವಲ 56 ದಿನಗಳಲ್ಲಿ ಕೂದಲು ಬೆಳೆಸುವ ಅದ್ಭುತ `ಸೀರಂ’ ಕಂಡು ಹಿಡಿದ ವಿಜ್ಞಾನಿಗಳು.!

By kannadanewsnow5721/04/2026 10:15 AM KARNATAKA 2 Mins Read

ಕೂದಲು ಉದುರುವಿಕೆ ಇಂದಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿರುವ ಗಂಭೀರ ಸಮಸ್ಯೆ. ಮಾನಸಿಕ ನೆಮ್ಮದಿ ಕೆಡಿಸುವ ಈ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹತ್ತಾರು…

BIG NEWS : ಬೆಳಗಾವಿಯಲ್ಲಿ ಭೀಕರ ಅಪಘಾತ : ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಗೂಡ್ಸ್‌ ಗಾಡಿ, ಇಬ್ಬರು ಸ್ಥಳದಲ್ಲೇ ಸಾವು!

21/04/2026 10:06 AM

ಬೆಳಗಾವಿಯಲ್ಲಿ ಮನಕಲಕುವ ಘಟನೆ : ಹೆತ್ತ ತಾಯಿ ಸತ್ತರೂ, ಅಂತ್ಯಕ್ರಿಯೆಗೆ ಬಾರದೆ ನೀವೇ ನೆರವೇರಿಸಿ ಎಂದ ಪಾಪಿ ಮಕ್ಕಳು!

21/04/2026 10:05 AM

BIG NEWS : ರಾಜ್ಯಾದ್ಯಂತ ನಾಳೆಯಿಂದ ‘CET’ ಪರೀಕ್ಷೆ ಆರಂಭ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ | WATCH VIDEO

21/04/2026 9:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.