ಶಿವಮೊಗ್ಗ: ಸಾಗರ ನಗರದಲ್ಲಿ ದಿನೇ ದಿನೇ ಸೇಲ್ಸ್ ಸರ್ಟಿಫಿಕೇಟ್ ಹಗರಣಗಳು ಹೆಚ್ಚಾಗುತ್ತಿವೆ. ಈ ಕಾರಣದಿಂದಲೇ ಸಾಗರ ನಗರದ ಕೋಟ್ಯಂತರ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗುತ್ತಿದೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ತಪ್ಪಿ ತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಪೌರಾಡಳಿತ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಕುರಿತಂತೆ ಹಜ್ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಉಪ ಲೋಕಾಯುಕ್ತರಿಗೆ ಪತ್ರ ಬರೆದಿರುವಂತ ಅವರು, ಸಾಗರ ನಗರಸಭೆಯ ಸೇಲ್ ದಿನದಿಂದ ದಿನಕ್ಕೆ ಸರ್ಟಿಫಿಕೇಟ್ ಹಾಗೂ ನಕಲಿ ಹಕ್ಕುಪತ್ರ ಪತ್ರದ ಹಗರಣ ಸುದ್ದಿಯಾಗುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಸರ್ಕಾರಿ ನಿವೇಶನಗಳನ್ನು ಹಾಗೂ ಜಾಗವನ್ನು ಸಂರಕ್ಷಣೆ ಮಾಡಬೇಕಿದ್ದ ಸರ್ಕಾರಿ ಅಧಿಕಾರಿಗಳ ಸೇಲ್ ಸರ್ಟಿಫಿಕೇಟ್ ಹೆಸರಿನಲ್ಲಿ ಕೋಟ್ಯಾಂತರ ಹಣದ ಹಗರಣ ಮಾಡಿರುವ ಬಗ್ಗೆ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿರುತ್ತದೆ ಎಂದಿದ್ದಾರೆ.
ಬಹಿರಂಗ ಹರಾಜು ನಿವೇಶನ ಸೇಲ್ ಸರ್ಟಿಫಿಕೇಟ್ ಎನ್ನುವ ಉಲ್ಲೇಖದೊಂದಿಗೆ ಯಾವುದೋ ಒಂದು ಇಸವಿ, ಯಾವುದೋ ದಿನಾಂಕವನ್ನು ನಮೂದು ಮಾಡಿ, ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನದ ಸರ್ಕಾರಿ ಮೌಲ್ಯವನ್ನು ಹಾಕಿ ನಗರಸಭೆಯಿಂದ ಉಪನೋಂದಣಿ ಇಲಾಖೆಯಲ್ಲಿ ಪೌರಾಯುಕ್ತರು ವಿಕ್ರಯಪತ್ರವನ್ನು ಬರೆದುಕೊಡುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.
ಉದಾಹರಣೆಗೆ ಹೇಳುವುದಾದರೆ ಸಾಗರ ನಗರದ ಯಾವುದೋ ಒಂದು ಬಡಾವಣೆಯಲ್ಲಿ ಸರ್ಕಾರಿ ನಿವೇಶನವಿದ್ದರೆ ಈ ನಿವೇಶನದ ನಂ ಹಾಗೂ ಖಾತೆ ನಂ. ನಮೂದಿಸಿ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಇವರ ಪತ್ರದ ಸಂಖ್ಯೆಯನ್ನು ಉಲ್ಲೇಖಿಸಿ ಒಂದು ದಿನಾಂಕವನ್ನು ನಮೂದು ಮಾಡಿ ಇದರಂತೆ ಸರ್ಕಾರಿ ನಿವೇಶನ ಬಹಿರಂಗ ಹರಾಜು ಹಾಕಿ ಎಂದು ನಿರ್ದೇಶಿಸಿದಂತೆ ಕಾನೂನುಬದ್ಧವಾಗಿ ನಿಯಮಾನುಸಾರ ಸಾರ್ವಜನಿಕವಾಗಿ ಬಹಿರಂಗ ಹರಾಜು ಮಾಡಲಾಗಿರುತ್ತದೆ ಎಂದು ನಗರಸಭೆ ಬರೆದುಕೊಟ್ಟ ಪತ್ರದಲ್ಲಿ ಹೇಳಿರುತ್ತಾರೆ. ಈ ರೀತಿಯಾಗಿ ಬಹಿರಂಗ ಹರಾಜು ಹಾಕಲಾಗಿದೆ ಎನ್ನುವುದೇ ದೊಡ್ಡ ಗೋಲ್ ಮಾಲ್ ವ್ಯವಹಾರವಾಗಿರುತ್ತದೆ ಎಂದಿದ್ದಾರೆ.
ನಿಯಾಮಾನುಸಾರ ಬಹಿರಂಗ ಹರಾಜು ಹಾಕಿ ಸರ್ಕಾರಿ ನಿವೇಶನ ಕೊಟ್ಟಿರುವುದು ಕೆಲವೇ ಕೆಲವು ನಿವೇಶನವಾದರೆ ಇದರ ಹೆಸರಿನಲ್ಲಿ ನಗರಸಭೆಯಿಂದ ಬರೆದುಕೊಟ್ಟು ಮಾರಾಟವಾದ ನಿವೇಶನಗಳು ನೂರಾರು ಆಗಿರುತ್ತವೆ. ಬಹು ಜಾಣ್ಮಯಿಂದ ಮೇಲ್ನೋಟಕ್ಕೆ ಕಾನೂನು ಬದ್ಧವಾಗಿ ಮಾಡಿದ್ದಾರೆ ಎನ್ನುವುದು ಪತ್ರದಲ್ಲಿ ಉಲ್ಲೇಖವಾಗಿರುತ್ತದೆ. ವಿನಃ ನಿಜರೂಪದಲ್ಲಿ ಯಾವುದೂ ಕಾನೂನು ಪಾಲನೆಯಾಗದೆ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಇವರ ಆದೇಶದ ಸಂಖ್ಯೆಯನ್ನು ಇಟ್ಟುಕೊಂಡು ಅದೆಷ್ಟೋ ಖಾಸಗಿ ವ್ಯಕ್ತಿಗಳಿಗೆ ಅಧಿಕಾರಿಗಳೇ ಸರ್ಕಾರಿ ನಿವೇಶನ ಮಾರಾಟ ಮಾಡಿ ಆರೋಪ. ಸಾರ್ವಜನಿಕರ ಹಣಗಳಿಸಿದ್ದಾರೆ ಎನ್ನವುದು ಸಾರ್ವಜನಿಕರು ಹೇಳುವ ಪಕಾರ ನಗರಸಭೆಯ ನಕಲಿ ಹಕ್ಕುಪತ್ರ ಹಾಗೂ ಸೇಲ್ ಸರ್ಟಿಫಿಕೇಟ್ ವ್ಯವಹಾರದ ದೊಡ್ಡ ಜಾಲ ನಗರದ ಎಲ್ಲಾ ವಾರ್ಡಿನಲ್ಲಿಯೂ ಆಗಿದೆ ಎಂದು ಹೇಳಿದ್ದಾರೆ.
ಅತೀ ಹೆಚ್ಚು ನಕಲಿ ಹಕ್ಕುಪತ್ರಗಳು ಜಂಬಗಾರು ವಾರ್ಡ್ ಹಾಗೂ ಅಣಲೇಕೊಪ್ಪ, ಶ್ರೀಧರ ನಗರ ಈ ಭಾಗದಲ್ಲಿ ಆಗಿದೆ. ಕಳೆದ 07 ವರ್ಷಗಳ ಅವಧಿಯಲ್ಲಿ ಈ ನಕಲಿ ದಾಖಲೆಯ ಬಹುಕೋಟಿ ವ್ಯವಹಾರದ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಕೈಗೊಂಡು ಈ ಹಗರಣದಲ್ಲಿ ಬಾಗಿಯಾದ ಖಾಸಗಿ ವ್ಯಕ್ತಿಗಳ ಹಾಗೂ ಈ ಅಕ್ರಮದಲ್ಲಿ ಬಾಗಿಯಾದ ಸಾಗರ ನಗರಸಭೆಯ ಸಿಬ್ಬಂಧಿ/ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BESCOM ಗ್ರಾಹಕರ ಗಮನಕ್ಕೆ: ಈ ‘ವಾಟ್ಸ್ ಆಪ್’ ಸಂಖ್ಯೆಗೆ ವಿದ್ಯುತ್ ಸಂಬಂಧಿತ ದೂರು ಸಲ್ಲಿಸಿ, ಕ್ಷಣದಲ್ಲೇ ಪರಿಹಾರ
`SSLC, PUC’ ಪಾಸಾದ ಯುವಕ/ಯುವತಿಯರಿಗೆ ಗುಡ್ ನ್ಯೂಸ್ : `PM ಇಂಟರ್ನ್ ಶಿಪ್ ಯೋಜನೆ’ಗೆ ಅರ್ಜಿ ಆಹ್ವಾನ
ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ | Waqf Amendment Bill