ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಲಿವರ್ಪೂಲ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ಮಾಲೀಕರಾದ ಫೆನ್ವೇ ಸ್ಪೋರ್ಟ್ಸ್ ಗ್ರೂಪ್ (ಎಫ್ಎಸ್ಜಿ) ಲಿವರ್ಪೂಲ್ ಅನ್ನು ಮಾರಾಟಕ್ಕೆಇಟ್ಟಿದ್ದಾರೆ. ಮರ್ಸಿಸೈಡ್ ಕ್ಲಬ್ ಅನ್ನು ಸಂಪೂರ್ಣವಾಗಿ ಖರೀದಿಸಲು ಹೆಚ್ಚಿನ ಆಸೆ ಹೊಂದಿರು ಅಂಬಾನಿ, ಈಗಾಗಲೇ ಕ್ಲಬ್ ಬಗ್ಗೆ ವಿಚಾರಿಸಿದ್ದಾರೆ ಎನ್ನಲಾಗುತ್ತಿದೆ.
2010 ರಲ್ಲಿ ಲಿವರ್ಪೂಲ್ ಕ್ಲಬ್ನ ಉಸ್ತುವಾರಿ ವಹಿಸಿಕೊಂಡ ಎಫ್ಎಸ್ಜಿ, ಈ ವಾರದ ಆರಂಭದಲ್ಲಿ ಫುಟ್ಬಾಲ್ ಜಗತ್ತನ್ನು ಬೆರಗುಗೊಳಿಸಿತ್ತು. ಅವರು ಕ್ಲಬ್ಗಾಗಿ ಕೊಡುಗೆಗಳನ್ನು ಕೇಳಲು ಮುಕ್ತರಾಗಿರುತ್ತಾರೆ ಎಂದು ಹೇಳಿದರು.
ಮಿರರ್ ಪ್ರಕಾರ, FSG ಲಿವರ್ಪೂಲ್ ಫುಟ್ಬಾಲ್ ಕ್ಲಬ್ ಅನ್ನು 4ಬಿಲಿಯನ್ ಬ್ರಿಟಿಷ್ ಪೌಂಡ್ ಗೆ ಮಾರಾಟ ಮಾಡಲು ಸಿದ್ಧವಾಗಿದೆ ಎನ್ನಲಾಗುತ್ತಿದೆ.
ಮುಖೇಶ್ ಅಂಬಾನಿ ಲಿವರ್ಪೂಲ್ ಖರೀದಿಸಲು ಆಸಕ್ತಿ ತೋರಿಸಿದ್ದು ಇದೇ ಮೊದಲಲ್ಲ. 2010 ರಲ್ಲಿ ಸಹಾರಾ ಗ್ರೂಪ್ನ ಅಧ್ಯಕ್ಷ ಸುಬ್ರೊಟೊ ರಾಯ್ ಜೊತೆಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿವರ್ಪೂಲ್ನಲ್ಲಿ 51 ಪ್ರತಿಶತ ಪಾಲನ್ನು ಬಿಡ್ ಮಾಡಲು ಬಯಸಿತ್ತು. ಆದಾಗ್ಯೂ, ವದಂತಿಗಳನ್ನು ಆಗಿನ ಲಿವರ್ಪೂಲ್ ಮುಖ್ಯ ಕಾರ್ಯನಿರ್ವಾಹಕ ಕ್ರಿಸ್ಟೈನ್ ಪರ್ಸ್ಲೋ ನಿರಾಕರಿಸಿದ್ದರು.