ತುಮಕೂರು : ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಮಾಜಿ ಸಂಸದ ಎಸ್ ಪಿ ಮುದ್ದ ಹನುಮೇಗೌಡ ನಾಳೆ (ನ.3) ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿ ಮಲ್ಲೇಶ್ವರಂನಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಎಸ್ ಪಿ ಮುದ್ದ ಹನುಮೇಗೌಡ ಅಧಿಕೃತವಾಗಿ ಬಿಜೆಪೊ ಸೇರಲಿದ್ದಾರೆ. ಬಳಿಕ 2024 ರ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ಮೊದಲು ಕಾಂಗ್ರೆಸ್ ನಲ್ಲಿದ್ದ ಮುದ್ದ ಹನುಮೇಗೌಡ ನಂತರ ಜೆಡಿಎಸ್ ಸೇರಿದ್ದರು. ನಂತರ ಮತ್ತೆ ಕಾಂಗ್ರೆಸ್ ಗೆ ಮರಳಿದ್ದರು, ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್, ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದರಿಂದ ತುಮಕೂರು ಸಂಸದರಾಗಿದ್ದ ಮುದ್ದ ಹನುಮೇಗೌಡ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ನಂತರ ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಮಾಜಿ ಸಂಸದ ಎಸ್ ಪಿ ಮುದ್ದ ಹನುಮೇಗೌಡ ನಾಳೆ (ನ.3) ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
BREAKING NEWS : ಕಲಬುರಗಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ : ಆರೋಪಿ ಅಪ್ರಾಪ್ತ ಬಾಲಕನ ಬಂಧನ
ರೇಣುಕಾಚಾರ್ಯ ಸಹೋದರನ ಪುತ್ರನ ‘ಮಿಸ್ಸಿಂಗ್ ಕೇಸ್’ : ನಾಪತ್ತೆಗೂ ಮುನ್ನ ಚಂದ್ರುಗೆ ಕರೆ ಮಾಡಿದ್ದು ಯಾರು ಗೊತ್ತಾ..?