ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಒಂದುಗೂಡಿ ಬೆಂಗಳೂರು ನಿಂದ ಮೈಸೂರಿನವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಎಂದು ಮೈಸೂರಿನಲ್ಲಿ ಪೊಲೀಸರು ಅವರ ಪಾದಯಾತ್ರೆಗೆ ತಡೆ ಒಡ್ಡಿದರು.
ಹೌದು ಮೈಸೂರಿನ ಕಸ್ತೂರಿ ನಿವಾಸ ಹೋಟಲ್ ಬಳಿ ಪಾದಯಾತ್ರೆಗೆ ಇದೀಗ ಪೊಲೀಸರು ತಡೆ ಒಡ್ಡಿದ್ದಾರೆ. ಮಧ್ಯಾಹ್ನ ಭೋಜನದ ವಿರಾಮ ನಂತರ ಪಾದಯಾತ್ರೆಗೆ ಪೊಲೀಸರು ತಡೆ ಒಡ್ಡಿದ್ದಾರೆ.ಸಂಜೆ 4 ಗಂಟೆಗೆ ಪಾದಯಾತ್ರೆ ಪುನಾರಂಭಿಸುವುದಾಗಿ ಬಿಜೆಪಿ ಹೇಳಿತ್ತು. ಆದರೆ ಮೈಸೂರು ಮಹಾರಾಜ ಕಾಲೇಜಿನ ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ಹಮ್ಮಿಕೊಂಡಿತ್ತು.
ಆದ್ದರಿಂದ ಮಹಾರಾಜ ಕಾಲೇಜು ಮೈದಾನದಿಂದ ಕೈ ಕಾರ್ಯಕರ್ತರು ನಿರ್ಗಮಿಸಿಲ್ಲ. ಹಾಗಾಗಿ ಸಂಜೆ 5:30ಕ್ಕೆ ಪಾದಯಾತ್ರೆ ಆರಂಭಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಟ್ರಾಫಿಕ್ ಜಾಮ್ ಆಗುವ ಕಾರಣದಿಂದ ತಡವಾಗಿ ಕೇಳುವಂತೆ ಪೊಲೀಸರು ಸೂಚಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದರು.