ಮಂಡ್ಯ: ಜಿಲ್ಲೆಯಲ್ಲಿ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆಯಾಗಿದ್ದು, 5 ಕೋಟಿ ದಂಡ ವಿಧಿಸಿದೆ. ಸಿಬಿಐ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಡಿಸಿದೆ. ಐವರು ತಲಾ 1 ಕೋಟಿ ಹಣವನ್ನು ಮೂಡಾಗೆ ಪಾವತಿಸಲು ಸೂಚನೆ ನೀಡಿದೆ.
BIGG NEWS: ಕೊಪ್ಪಳದಲ್ಲಿ ತುಂಬಿದ ಹಳ್ಳದ ನೀರು; ಸಿಲುಕಿಕೊಂಡ ಐವರು ರೈತರು
ಕೆಬ್ಬಳ್ಳಿ ಆನಂದ್, ನಾಲಿಂಗಸ್ವಾಮಿ , ಚಂದ್ರಶೇಖರ್ ಸೇರಿದಂತೆ ಐವರಿಗೆ ಜೈಲು ಶಿಕ್ಷೆಯಾಗಿದೆ. ಮೂಡಾದಲ್ಲಿದ ಹಣ ದುರುಪಯೋಗ ಮಾಡಿಕೊಂಡಿದ್ದರು.ಇದೀಗ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. 2013ರಲ್ಲಿ ಮಂಡ್ಯದಲ್ಲಿ ಮೂಡಾ ಹಗರಣ ನಡೆದಿತ್ತು. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮೂಡಾ) ಸೇರಿದ 5 ಕೋಟಿ ಠೇವಣಿ ಆರೋಪಿಗಳು ಲಪಟಾಯಿಸಿದ್ದರು. ಆರೋಪದಡಿಯಲ್ಲಿ ಇಂದು ಆರೋಪಿಗಳಿಗೆ ಶಿಕ್ಷೆಯಾಗಿದೆ.