ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ HC ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದು, ಇಲಿ ಹೋಯಿತು, ಕೋತಿ ಹೋಯಿತು ಸಿಬಿಐ ಕೊಡಿ ಎಂದರೆ ಹೇಗೆ? ನಮ್ಮ ಅಧಿಕಾರಿಗಳು ತನಿಖೆ ಮಾಡಲು ಸಮರ್ಥರಿದ್ದಾರೆ ಬಿಜೆಪಿ ಅವಧಿಯಲ್ಲಿ ಎಷ್ಟು ಪ್ರಕರಣಗಳು ಸಿಬಿಐ ಕೊಟ್ಟಿದ್ದಾರೆ ಹೇಳಿ ಎಂದು ವಾಗ್ದಾಳಿ ನಡೆಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಒತ್ತಾಯದ ವಿಚಾರವಾಗಿ ಮೂಡಾದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಮಿತಿ ರದ್ದಿಗೆ ಸಲಹೆ ನೀಡಿದ್ದೇವೆ.ಸಮಿತಿ ರದ್ದು ಮಾಡಲು ಸ್ವಯಂ ಸಿದ್ಧರಾಮಯ್ಯಗೆ ಸಲಹೆ ಕೊಟ್ಟಿದ್ದೇವೆ. ಮೂವರ ಸಮಿತಿಯಷ್ಟೇ ಇರಲಿ ಎಂದು ಸಿಎಂ ಗೆ ಸಲಹೆ ಕೊಟ್ಟಿದ್ದೇವೆ ಎಂದರು.
ಈ ಸಲಹೆಗೆ ಸಿಎಂ ಸಿದ್ದರಾಮಯ್ಯ ಪೂರಕವಾಗಿ ಸ್ಪಂದಿಸಿದ್ದಾರೆ. ಇಲಿ ಹೋಯಿತು, ಕೋತಿ ಹೋಯಿತು, ಸಿಬಿಐ ಕೊಡಿ ಎಂದರೆ ಹೇಗೆ?ನಮ್ಮ ಅಧಿಕಾರಿಗಳು ತನಿಖೆ ಮಾಡಲು ಸಮರ್ಥರಿದ್ದಾರೆ.ಬಿಜೆಪಿ ಅವಧಿಯಲ್ಲಿ ಎಷ್ಟು ಪ್ರಕರಣಗಳು ಸಿಬಿಐ ಕೊಟ್ಟಿದ್ದಾರೆ ಹೇಳಿ ಎಂದು ಮೈಸೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ HC ಮಾದೇವಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವುದೇ ಪಕ್ಷದವರು ಇರಲಿ ಅಧಿಕಾರಿ ಇರಲಿ ಪ್ರಭಾವಿ ಇರಲಿ ಅವರ ಪಟ್ಟಿಯನ್ನು ಜಾಹೀರಾತು ಮೂಲಕ ಬಹಿರಂಗ ಪಡಿಸಲಾಗುತ್ತದೆ. ಹಗರಣದಲ್ಲಿ ಇರುವ ಭ್ರಷ್ಟರ ಪತ್ತೆಗಾಗಿ ತನಿಖೆ ನಡೆಯುತ್ತಿರುವುದು ಎಲ್ಲವನ್ನು ಹೊರಗೆ ತಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ.ಮೈಸೂರಿನಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್ಚಿ ಮಾದೇವಪ್ಪ ಹೇಳಿಕೆ ನೀಡಿದರು.