ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್ ತನಿಖೆಯ ವಿಚಾರವಾಗಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು. ಈ ಒಂದು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಬಳಿಕ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, 2025 ಜನವರಿ 15ಕ್ಕೆ ಮುಂದೂಡಿದರು. ಅಲ್ಲದೇ ಅವತ್ತೇ ಈ ಒಂದು ಪ್ರಕರಣದ ಅಂತಿಮ ವಿಚಾರಣೆ ನಡೆಸಲು ನಿರ್ಧರಿಸಿದೆ.
ವಿಚಾರಣೆ ಆರಂಭವಾದ ಬಳಿಕ ಎಲ್ಲಾ ಪ್ರತಿವಾದಿಗಳಿಗೂ ನೋಟಿಸ್ ಜಾರಿಯಾಗಿದೆ ಎಂದು ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ ಜಿ ರಾಘವನ್ ಅವರು ವಾದ ಮಂಡಿಸಿದರು. ಹೈ ಕೋರ್ಟ್ ಎದುರಿನ ಬಿಲ್ಡಿಂಗ್ ನೋಟಿಸ್ ಜಾರಿಯಾಗಲು 35 ದಿನ ಸಮಯ ತಗುಲಿರುವುದು ಶಾಕಿಂಗ್ ವಿಚಾರ ಎಂದು ಇದೆ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿ ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲರಾದಂತಹ ಅಭಿಷೇಕ್ ಮನುಸಿಂಗ್ವಿ ಹಾಗೂ ಕಪಿಲ್ ಸಿಬಲ್ ನ್ಯಾಯಮೂರ್ತಿಗಳಿಗೆ ಮನವಿ ಮಾಡಿಕೊಂಡರು. ಈ ವೇಕೆ 2025 ಜನವರಿ 15 ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್, ಅಷ್ಟರಲ್ಲಿ ಆಕ್ಷೇಪಣೆ ಸಲ್ಲಿಸಲು ಪ್ರತಿ ವಾದಿಗಳಿಗೆ ಸೂಚನೆ ನೀಡಿತು. ಅಲ್ಲದೆ ಜನೆವರಿ 15 ರಂದೆ ಅಂತಿಮ ವಿಚಾರಣೆ ನಡೆಯಿಸಲು ಹೈಕೋರ್ಟ್ ನಿರ್ಧರಿಸಿದೆ.








