ಬೆಂಗಳೂರು: ಮುಡಾ ಅಕ್ರಮ ಸಂಬಂಧ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಲ್ಲಿಸಿದ್ದಂತ ಖಾಸಗಿ ದೂರಿನ ಸಂಬಂಧ ರಾಜ್ಯಪಾಲರು ನೋಟಿಸ್ ನೀಡಿದ್ದರು. ಈ ನೋಟಿಸ್ ವಿರುದ್ಧವೇ ಇಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಇಂದು ವಿಧಾನಸೌಧದಲ್ಲಿ ಮಹತ್ವದ ರಾಜ್ಯಸಚಿವ ಸಂಪುಟ ಸಭೆ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಿಎಂ ಸಿದ್ಧರಾಮಯ್ಯ ಅನುಪಸ್ಥಿತಿಯಲ್ಲಿ ನಡೆಯಿತು. ಮುಡಾ ದಾಖಲೆಗಳನ್ನು ಸಚಿವ ಸಂಪುಟ ಸಭೆಗೆ ತರಿಸಿಕೊಂಡು, ಯಾರೆಲ್ಲರಿಗೂ ಸೈಟು ಹಂಚಿಕೆಯಾಗಿದೆ ಎನ್ನುವ ಬಗ್ಗೆ ಚರ್ಚಿಸಲಾಯಿತು.
ಈ ಬಳಿಕ ಇಂದಿನ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರು ಸಿಎಂ ಸಿದ್ಧರಾಮಯ್ಯಗೆ ಮುಡಾ ಹಗರಣ ಸಂಬಂಧ ನೋಟಿಸ್ ನಲ್ಲಿ ಎತ್ತಿರುವಂತ ಪ್ರಶ್ನೆಗಳನ್ನು ವಿರೋಧಿಸಿ ಸುದೀರ್ಘ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಅಲ್ಲದೇ ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಎತ್ತಿರುವ ಆರೋಪಗಳಿಗೂ ದಾಖಲೆ ಸಹಿತ ಉತ್ತರ ಕೊಟ್ಟು ನಿರ್ಣಯ ಕೈಗೊಳ್ಳಲಾಗಿದೆ.
BREAKING : ನಟ ದರ್ಶನ್ ಗೆ ಜೈಲೇ ಗತಿ : ಆ.14ರವರೆಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿ ಕೋರ್ಟ್ ಆದೇಶ
‘HSRP’ ನಂಬರ್ ಪ್ಲೇಟ್ ಬುಕಿಂಗ್ ವೇಳೆ ಇರಲಿ ಎಚ್ಚರ : ಸೈಬರ್ ವಂಚಕರಿಂದ 95 ಸಾವಿರ ರೂ. ಕಳೆದುಕೊಂಡ ವ್ಯಕ್ತಿ!