ಬೆಂಗಳೂರು : ಮುಡಾದಲ್ಲಿ ನಡೆದಿರುವಂತಹ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿ, ಬಿಜೆಪಿಯವರಿಗೆ ಯಾವುದೇ ವಿಷಯವಿಲ್ಲ. ಬಿಜೆಪಿಗರು ಆರ್ ಎಸ್ ಎಸ್ ಹೇಳಿದಂತೆ ಕೇಳುತ್ತಾರೆ ಎಂದು ಶಬ್ ಸಿದ್ದರಾಮಯ್ಯ ವಗ್ಗರಣೆ ನಡೆಸಿದರು.
ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಯಾವುದೇ ವಿಷಯವಿಲ್ಲ. ಬಿಜೆಪಿಗರು ಆರ್ ಎಸ್ ಎಸ್ ನವರು ಹೇಳಿದಂತೆ ಕೇಳುತ್ತಿದ್ದಾರೆ. ನಮಗೆ ಸೇರಿದ ಜಾಗವನ್ನು ಮೂಡಾದವರು ಒತ್ತುವರಿ ಮಾಡಿದ್ದಾರೆ. ನಮಗೆ ಸೇರಿದ 3.16 ಎಕರೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. 50:50 ಅನುಪಾತದಲ್ಲಿ ಜಾಗ ಕೊಡಿ ಎಂದು ಮುಡಾಗೆ ಹೇಳಿದ್ದೆವು. ಇಂತಹ ಜಾಗದಲ್ಲಿ ಸೈಟ್ ಕೊಡಿ ಎಂದು ನಾವು ಹೇಳಿದ್ವಾ? ಎಂದು ಪ್ರಶ್ನಿಸಿದರು.
ಜಾಗ ಕೊಟ್ಟಾಗ 2021 ರಲ್ಲಿ ಬಿಜೆಪಿಯವರು ಅಧಿಕಾರದಲ್ಲಿದ್ದರು. ಈಗ ಅವರೇ ಆರೋಪ ಮಾಡಿದರೆ ಹೇಗೆ? ಇಂತಹ ಕಡೆಯಲ್ಲೇ ಜಾಗ ಕೊಡಿ ಎಂದು ನಾವು ಹೇಳಿದ್ವಾ? ಹಾಗಾದರೆ 3.65 ಜಾಗಕ್ಕೆ ಪರಿಹಾರ ಕೊಡಲಿ.ಕಾನೂನು ಪ್ರಕಾರ 62 ಕೋಟಿ ರೂಪಾಯಿ ಆಗುತ್ತದೆ ಕೊಟ್ಟು ಬಿಡಲಿ. ಮುಡಾ ಕಚೇರಿಯಿಂದ ಸಚಿವ ಭೈರತಿ ಸುರೇಶ್ ಯಾವುದೇ ಫೈಲ್ ತಂದಿಲ್ಲ. ಬಿಜೆಪಿಯವರು ರಾಜಕೀಯವಾಗಿ ಮಾಡುತ್ತಿರುವ ಆರೋಪವಾಗಿದೆ ಎಂದು ವಿಧಾನಸೌಧದಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು