ಧಾರವಾಡ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಲಯದ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಸಚಿವ ಭೈರತಿ ಸುರೇಶ್ ಗೆ ಸಮನ್ಸ್ ಜಾರಿ ಮಾಡಿದ್ದು ಈ ಒಂದು ಸಮನ್ಸ್ ಪ್ರಶ್ನಿಸಿ, ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ನಲ್ಲಿ ಬೈರತಿ ಸುರೇಶ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ಅವರು ವಾದ ಮಂಡಿಸುತ್ತಿದ್ದಾರೆ.
ED ನೀಡಿದ್ದ ಸಮನ್ಸ್ ರದ್ದು ಕೋರಿದ ಭೈರತಿ ಸುರೇಶ್ ಅರ್ಜಿ ವಿಚಾರಣೆ ಇದೀಗ ಧಾರವಾಡ ಹೈಕೋರ್ಟ್ ಪೀಠದಲ್ಲಿ ಆರಂಭವಾಗಿದೆ. ಸಚಿವ ಭೈರತಿ ಸುರೇಶ್ ಪರವಾಗಿ ಹಿರಿಯ ವಕೀಲ ಸೀವಿ ನಾಗೇಶ್ ಅವರು ವಾದ ಮಂಡಿಸುತ್ತಿದ್ದು, ಮುಡಾದಲ್ಲಿ ಭೈರತಿ ಸುರೇಶ್ ಯಾವುದೇ ಹುದ್ದೆ ವಹಿಸಿಕೊಂಡಿಲ್ಲ ಹೀಗಾಗಿ ಇಡಿ ಸಮನ್ಸ್ ಕಾನೂನು ಬಾಹಿರವಾಗಿದೆ. ಈ ವೇಳೆ ಭೈರತಿ ಸುರೇಶ್ ಯಾವ ಇಲಾಖೆ ಸಚಿವರು ಎಂದು ಈ ವೇಳೆ ಹೈಕೋರ್ಟ್ ಪ್ರಶ್ನಿಸಿದೆ. ಭೈರತಿ ಸುರೇಶ್ ನಗರಾಭಿವೃದ್ಧಿ ಇಲಾಖೆಯ ಸಚಿವರು ಎಂದು ವಕೀಲರು ಪ್ರಶ್ನೆಗೆ ಸಿವಿ ನಾಗೇಶ್ ಉತ್ತರಿಸಿದ್ದಾರೆ.
ಬಳಿಕ ಇಡಿ ಪರವಾಗಿ ಹೆಚ್ಚುವರಿ ಸೋಲಿಸಿಟರ್ ಜನರಲ್ ಅರವಿಂದ್ ಕಾಮತ್ ವಾದ ಮಂಡಿಸಿದರು. ಇಡಿ ಸಮನ್ಸ್ ಜಾರಿಗೊಳಿಸಿದಾಗ ಹೈಕೋರ್ಟ್ ಮಧ್ಯ ಪ್ರವೇಶಿಸಬಾರದು. ಈ ಬಗ್ಗೆ ಸುಪ್ರೀಂ ಕೋರ್ಟ್ ನ ಇತ್ತೀಚಿನ ತೀರ್ಪು ಇದೆ ಎಂದು ಅವರು ವಾದಿಸಿದಾಗ, ಆರೋಪಿಗೆ ಸಮನ್ಸ್ ಜಾರಿಗೊಳಿಸಬೇಕೆಂಬ ನಿಯಮವಿಲ್ಲ.ಇಡಿ ತನಿಖಾಧಿಕಾರಿಗಳು ನಮೂನೆ ಒಂದನ್ನು ಕಳುಹಿಸಿದ್ದಾರೆ.
ಇದರಲ್ಲಿ ಭೈರತಿ ಸುರೇಶ್ ಕುಟುಂಬದವರು ಮತ್ತು ಉದ್ಯೋಗಿಗಳು ಇತರರ ವಿವರ ಕೇಳಿದ್ದಾರೆ. ಇದು ಅವರ ಖಾಸಗಿತನದ ಸ್ಪಷ್ಟ ಉಲ್ಲಂಘನೆಯಾಗಿದೆ.14 ಸೈಟ್ ಹಂಚಿಕೆಗೂ ಭೈರತಿ ಸುರೇಶ್ ಗು ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದರು.ಮುಡಾದ ಮಾಜಿ ಆಯುಕ್ತ ಡಿಬಿ ನಟೇಶ್ ವಿರುದ್ಧದ ಇಡಿ ಸಮನ್ಸ್ ಅನ್ನು ಹೈಕೋರ್ಟ್ ರದ್ದು ಪಡಿಸಿದೆ ಎಂದು ಹೈಕೋರ್ಟ್ ಆದೇಶದ ವಿವರವನ್ನು ಈ ವೇಳೆ ವಕೀಲ ಸಿವಿ ನಾಗೇಶ್ ಅವರು ಓದಿದರು.
ಡಿ.ಬಿ ನಟೇಶ್ ವಿರುದ್ಧದ ಶೋಧನೆ ಮತ್ತು ಜಪ್ತಿ ಕ್ರಮ ರದ್ದುಪಡಿಸಲಾಗಿದೆ. ಹೈ ಕೋರ್ಟ್ ಇಡಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಸ್ವಾತಂತ್ರ್ಯ ಕೊಟ್ಟಿದೆ. ಭೈರತಿ ಸುರೇಶ್ ಪಾತ್ರದ ಬಗ್ಗೆ ಸಮನ್ಸ್ ನಲ್ಲಿ ಯಾವುದೇ ರೀತಿಯ ಉಲ್ಲೇಖವಿಲ್ಲ. 2023ರ ಜೂನ್ ತಿಂಗಳಿನಲ್ಲಷ್ಟೇ ನಗರಾಭಿವೃದ್ಧಿ ಸಚಿವರಾಗಿದ್ದಾರೆ ಎಂದು ವಾದಿಸಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ಆಗಿದ್ದರಿಂದಲೇ ಸಮನ್ಸ್ ನೀಡಬಹುದಲ್ಲವೇ? ಎಂದು ಇದೆ ವೇಳೆ ಸಿವಿ ನಾಗೇಶ್ ಗೆ ಹೈಕೋರ್ಟ್ ಪ್ರಶ್ನಿಸಿತು.
ಆದರೆ ಇಡಿ ಯಾವುದೇ ಕಾರಣಕ್ಕೂ ನೀಡದೆ ಸಮನ್ಸ್ ಜಾರಿಗೊಳಿಸಿದೆ. 14 ಸೆಟ್ ಹಂಚಿಕೆ ವಿಚಾರದಲ್ಲಿ ಭೈರತಿ ಸುರೇಶ್ ಪಾತ್ರವಿಲ್ಲ ಎಂದು ಹಿರಿಯ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿದರು.ತಂಗಿ, ಮಗಳು ಹಾಗೂ ಅಳಿಯ ಸಂಬಂಧಿಗಳ ಬ್ಯಾಂಕ್ ಅಕೌಂಟ್ ಕೇಳಿದ್ದಾರೆ. ಇನ್ನು ಮೊಮ್ಮಕ್ಕಳಾಗಿಲ್ಲ ಹೀಗಾಗಿ ಮೊಮ್ಮಕ್ಕಳ ವಿವರ ಕೇಳಿಲ್ಲ. ಐಟಿ ಅಧಿಕಾರಿಗಳು ಕೇಳಿದ್ದರೆ ಹೇಳಬಹುದು ಆದರೆ ಇಡಿ ಅಧಿಕಾರಿಗಳಿಗೆ ಅಲ್ಲ. ಇಡಿ ಸಮನ್ಸ್ ನಮೂನೆ ಉಲ್ಲೇಖಿಸಿ ಸಿವಿ ನಾಗೇಶ್ ವಾದ ಮಂಡಿಸಿದರು.ಈ ವೇಳೆ ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮಂತ್ ವಾದ ಮಂಡಿಸಿ ಒಂದೆರಡು ದಿನಗಳಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.