ಧಾರವಾಡ: ಮುಡಾ ಹಗರಣ ಸಂಬಂಧ ಇಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಅವರಿಗೆ ಸಮನ್ಸ್ ನೀಡಲಾಗಿತ್ತು. ಈ ಸಮನ್ಸ್ ಗೆ ಹೈಕೋರ್ಟ್ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶಿಸಿದೆ.
ಇಂದು ಧಾರವಾಡದ ವಿಭಾಗೀಯ ಹೈಕೋರ್ಟ್ ನ್ಯಾಯಪೀಠದಲ್ಲಿ ಇಡಿ ಸಮನ್ಸ್ ರದ್ದು ಕೋರಿ ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ನಡೆಸಲಾಯಿತು.
ಇಡಿ ಹಾಗೂ ಸಿಎಂ ಪತ್ನಿ ಪಾರ್ವತಿ, ಬೈರತಿ ಸುರೇಶ್ ಎರಡು ಕಡೆಯ ವಾದ, ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತು. ಅಲ್ಲದೇ ಇಡಿ ಸಮನ್ಸ್ ಗೆ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶಿಸಿದೆ.
ಅಂದಹಾಗೇ ಸಿಎಂ ಸಿದ್ಧಾರಮಯ್ಯ ಪತ್ನಿ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟಾ ಅವರು, ಇಡಿಯು ಮೂಲ ಅಂಶಗಳೇ ಇಲ್ಲದೇ ಇಸಿಆರ್ ದಾಖಲಿಸಿದೆ. ಸೈಟ್ ಹಿಂದಿರಸಿರುವ ಅಪರಾಧ ಒಪ್ಪಿಕೊಂಡಂತೆ ಅಲ್ಲ. ಸಿಎಂ ಮೇಲೆ ಆರೋಪ ಬಂದಿದ್ದಕ್ಕೆ ಆಗಿದೆ ಎಂಬುದಾಗಿ ವಾದಿಸಿದರು. ಇಡಿ ಪರವಾಗಿ ಎಎಸ್ ಜೆ ಅರವಿಂದ್ ಕಾಮತ್ ವಾದಿಸಿದರು.
BREAKING: ರಾಜ್ಯ ಸರ್ಕಾರದಿಂದ ಅರಣ್ಯಪಡೆಗೆ ಪ್ರಥಮ ಮಹಿಳಾ ಮುಖ್ಯಸ್ಥೆಯಾಗಿ ‘ಮೀನಾಕ್ಷಿ ನೇಗಿ’ ನೇಮಕ
ಕೋಲಾರದ ವೇಮಗಲ್ ನಲ್ಲಿ 315 ಕೋಟಿ ಹೂಡಿಕೆ, 550 ಉದ್ಯೋಗ ಸೃಷ್ಟಿ: ಸಚಿವ ಎಂ.ಬಿ.ಪಾಟೀಲ