ಚಿಕ್ಕಬಳ್ಳಾಪುರ : ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತುರುವ ಬೆನ್ನಲ್ಲೇ ಕಣಕ್ಕಿಳಿಯಲು ರಾಜಕೀಯ ಘಟಾನುಘಟಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಇದೀಗ ಸಚಿವ ಎಂಟಿಬಿ ನಾಗರಾಜ್ ಪುತ್ರ ಕೂಡ ವಿಧಾನಸಭಾ ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಈ ಕುರಿತು ಸ್ವತಹ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದು, ಈ ಬಾರಿ ಚುನಾವಣಾ ಕಣದಿಂದ ನಾನು ಹಿಂದೆ ಸರಿಯಲಿದ್ದೇನೆ, ಬದಲಿಗೆ ಪುತ್ರನಿಗೆ ಅಖಾಡಕ್ಕಿಳಿಸಲು ತೀರ್ಮಾನಿಸಿದ್ದೇನೆ ಎಂದು ಸ್ವತಃ ಸಚಿವ ಎಂಟಿಬಿ ನಾಗರಾಜ್ ಅವರೇ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಪುತ್ರ ನಿತೀಶ್ಗೆ ಹೊಸಕೋಟೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ. ನಾನು ಪರಿಷತ್ ಸದಸ್ಯನಾಗಿ ಇನ್ನೂ 3 ವರ್ಷಗಳ ಕಾಲ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು. 70 ವರ್ಷದ ರಾಜಕಾರಣಿಗಳಿಗೆ ಪಕ್ಷದ ವರಿಷ್ಠರು ಟಿಕೆಟ್ ನಿರಾಕರಿಸಿದರೆ ತಮ್ಮ ಪುತ್ರನಿಗೆ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಮನವಿ ಮಾಡುತ್ತೇನೆ., ಬೇರೆ ಪಕ್ಷಗಳಿಗೆ ಹಾರುವ ಜಾಯಮಾನ ನನ್ನದಲ್ಲ..ನನಗೆ ಈ ರಾಜಕಾರಣ ಸಾಕಾಗಿ ಹೋಗಿದೆ, ಆದ್ದರಿಂದ ಮಗನನ್ನು ನಿಲ್ಲಿಸಲು ನಿರ್ಧರಿಸಿದ್ದೇನೆ ಎಂದರು.
ಇಂದು ಬಿಬಿಎಂಪಿ ವ್ಯಾಪ್ತಿಯ ಯಾವೆಲ್ಲಾ ಏರಿಯಾದಲ್ಲಿ ಒತ್ತುವರಿ ತೆರವು ಗೊತ್ತಾ.? ಇಲ್ಲಿದೆ ಡೀಟೈಲ್ಸ್