ಶಿವಪುರಿ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಮನುಕುಲವೇ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದೆ. 70 ವರ್ಷದ ವೃದ್ಧೆ ಮೇಲೆ ಮಗನ ಅಳಿಯ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಿವಪುರಿ ಜಿಲ್ಲೆಯ ಗೋವರ್ಧನ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ 70 ವರ್ಷದ ಮಹಿಳೆಯೊಬ್ಬಳ ಮೇಲೆ ತನ್ನ ಮಗನ ಅಳಿಯ ಅತ್ಯಾಚಾರವೆಸಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಈ ಬಗ್ಗೆ ಸಂತ್ರಸ್ತೆ ವೃದ್ಧೆ ತನ್ನ ಮಗನೊಂದಿಗೆ ಗೋವರ್ಧನ್ ಪೊಲೀಸ್ ಠಾಣೆಗೆ ಬಂದು ಘಟನೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಮನೆಯಲ್ಲಿ ವೃದ್ಧೆ ಒಬ್ಬಳೇ ಇದ್ದುದ್ದನ್ನು ಕಂಡ ಆರೋಪಿ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಈ ವೇಳೆ ಆಕೆಯ ಕಿರುಚಾಟವನ್ನು ತಡೆಯಲು ಆರೋಪಿ ಆಕೆಯ ಬಾಯಿಗೆ ಬಲವಂತವಾಗಿ ಬಿಗಿಹಿಡಿದು ಈ ಕೃತ್ಯವೆಸಗಿದ್ದಾನೆ.
ವೃದ್ಧೆ ನೀಡಿದ ಹೇಳಿಕೆ ಮೇರೆಗೆ ಮಹಿಳಾ ಸಬ್ ಇನ್ಸ್ಪೆಕ್ಟರ್ ಜ್ಯೋತ್ಸ್ನಾ ವರ್ಮಾ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಶಿವಪುರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಆರೋಪಿಗಾಗಿ ಶೋಧ ಮುಂದುವರಿದಿದೆ ಎಂದು ಗೋವರ್ಧನ ಪೊಲೀಸ್ ಠಾಣೆ ಪ್ರಭಾರಿ ರಘುವೀರ್ ಧಕಡ್ ತಿಳಿಸಿದ್ದಾರೆ.
BIGG BREAKING NEWS : ಉಡುಪಿಯಲ್ಲಿ ಮತ್ತೆ ಭುಗಿಲೆದ್ದ ಧರ್ಮ ದಂಗಲ್ : ಅಂದು ಹಿಜಾಬ್, ಇಂದು ಅಜಾನ್ ಡ್ಯಾನ್ಸ್ ವಿವಾದ!
BIGG NEWS: 108 ಆಂಬುಲೆನ್ಸ್ ಸಿಬ್ಬಂದಿಯ ಮನವೊಲಿಸಲು ಯತ್ನಿಸುತ್ತೇವೆ: ಡಾ. ಸುಧಾಕರ್
BIG NEWS: ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಬೆದರಿಕೆ: ಕೆಲಸಕ್ಕೆ ರಾಜೀನಾಮೆ ಕೊಟ್ಟ ಐವರು ಸ್ಥಳೀಯ ಪತ್ರಕರ್ತರು
BIGG BREAKING NEWS : ಉಡುಪಿಯಲ್ಲಿ ಮತ್ತೆ ಭುಗಿಲೆದ್ದ ಧರ್ಮ ದಂಗಲ್ : ಅಂದು ಹಿಜಾಬ್, ಇಂದು ಅಜಾನ್ ಡ್ಯಾನ್ಸ್ ವಿವಾದ!