ಕೆಎನ್ಎನ್ ಡಿಜಿಟಲ್ ಡೆಸ್ಕ್ : ರೇವಾದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
BREAKING NEWS : ಉಗಾಂಡಾದಲ್ಲಿ ಎಬೋಲಾ ವೈರಸ್ನ 7 ಪ್ರಕರಣಗಳು ಪತ್ತೆ, ಒಂದು ಸಾವು ದೃಢ | Ebola Virus
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಂಸದರು ಆಗಮಿಸಿದ್ದರು. ಈ ವೇಳೆ ಶಾಲೆ ಪರಿಶೀಲಿಸಿದರು. ಈ ವೇಳೆ ಕೊಳಕಿನಿಂದ ತುಂಬಿದ್ದ ಶೌಚಾಲಯವನ್ನು ಕಂಡ ಸಂಸದರು ಸ್ವತಃ ತಾವೇ ಅದನ್ನು ಸ್ವಚ್ಛ ಮಾಡಲು ಮುಂದಾದು.
ಶೌಚಾಲಯ ಸ್ವಚ್ಛಗೊಳಿಸಲು ಸಂಸದರಿಗೆ ಬ್ರಷ್, ಗ್ಲೌಸ್ ಕೂಡ ಸಿಗದ ಸ್ಥಿತಿ ತಲುಪಿತ್ತು. ನಂತರ ಸಂಸದರು ಖಾಲಿ ಕೈಯಿಂದ ಶೌಚಾಲಯದ ಆಸನವನ್ನು ಸ್ವಚ್ಛಗೊಳಿಸಿದರು. ಸಂಸದರು ಈ ಕೆಲಸ ಮಾಡುವಾಗ ಶಾಲೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಕೂಡ ಅಲ್ಲೆ ಇದ್ದರು.
ವಿಡಿಯೋವನ್ನು ಪಿಎಂ-ಸಿಎಂ ಕೂಡ ಟ್ಯಾಗ್ ಮಾಡಿದ ಸಂಸದರು
ಶೌಚಾಲಯವನ್ನು ಸ್ವಚ್ಛಗೊಳಿಸಿದ ನಂತರ, ಜನಾರ್ದನ್ ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಸಂಸದ ಬಿಜೆಪಿ ಅಧ್ಯಕ್ಷ ವಿಡಿ ಶರ್ಮಾ ಮತ್ತು ಹಿತಾನಂದ ಶರ್ಮಾ ಅವರನ್ನು ಟ್ಯಾಗ್ ಮಾಡುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
पार्टी द्वारा चलाये जा रहे सेवा पखवाड़ा के तहत युवा मोर्चा के द्वारा बालिका विद्यालय खटखरी में वृक्षारोपण कार्यक्रम के उपरांत विद्यालय के शौचालय की सफाई की।@narendramodi @JPNadda @blsanthosh @ChouhanShivraj @vdsharmabjp @HitanandSharma pic.twitter.com/138VDOT0n0
— Janardan Mishra (@Janardan_BJP) September 22, 2022
ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೋ 6 ಬಾರಿ ಶೇರ್
ಸರಪಂಚ್ನಿಂದ ಸಂಸದರಾದ ಮಿಶ್ರಾ ಅವರು ಈಗಾಗಲೇ 6 ಬಾರಿ ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಪ್ರಧಾನಿ ಮೋದಿಯವರಿಗೂ ಟ್ಯಾಗ್ ಮಾಡಿದ್ದಾರೆ. ಅದೇ ರೀತಿ ಹಲವು ಬಾರಿ ಅವರು ಕಸ ಸಂಗ್ರಹಿಸುವ ಮತ್ತು ಕಚೇರಿಯ ಟೇಬಲ್ ಅನ್ನು ಸ್ವಚ್ಛಗೊಳಿಸುವ ವಿಡಿಯೋ ಕೂಡ ಹೊರಬಿದ್ದಿದೆ.