ಶಿವಮೊಗ್ಗ : ಜಿಲ್ಲೆಯ ಸಂಸದರಾದಂತ ಬಿವೈ ರಾಘವೇಂದ್ರ ಪ್ರಯಾಣಿಸುತ್ತಿದ್ದಂತ ಕಾರು ಅಪಘಾತಗೊಂಡಿದೆ. ಈ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಸಂಸದ ಬಿವೈ ರಾಘವೇಂದ್ರ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.
ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಪ್ರಯಾಣಿಸುತ್ತಿದ್ದಂತ ಕಾರು ಕುಂಚೇನಹಳ್ಳಿ ಗ್ರಾಮದ ಸಮೀಪದಲ್ಲಿ ಹಿಂದಿನಿಂದ ಬೊಲೆರೋ ಕಾರೊಂದು ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಈ ಪರಿಣಾಮ ಕಾರು ಹಾನಿಯಾಗಿದ್ದು, ಅದರಲ್ಲಿದ್ದಂತ ಸಂಸದ ಬಿವೈ ರಾಘವೇಂದ್ರ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿಗೆ ಹಾನಿಯಾಗಿದ್ದರಿಂದ ಸಂಸದ ಬಿವೈ ರಾಘವೇಂದ್ರ, ಇತರೆ ಸಿಬ್ಬಂದಿಗಳು ಮತ್ತೊಂದು ಕಾರಿನಲ್ಲಿ ತಮ್ಮ ಪ್ರಯಾಣ ಮುಂದುವರೆಸಿದರು ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
BREAKING: ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರದ ‘ನಿರ್ಮಾಣ್-2 ತಂತ್ರಾಂಶ’ ಸ್ಥಗಿತ
SHOCKING: ಹಣಕ್ಕಾಗಿ ದೊಡ್ಡಪ್ಪ, ದೊಡ್ಡಮ್ಮನಿಗೆ ಹೈಡೋಸೇಜ್ ಇಂಜೆಕ್ಷನ್ ನೀಡಿ ಕೊಂಡ ಪಾಪಿ ವೈದ್ಯ








