ಬೆಂಗಳೂರು : ಸಿಲಿಕಾನ್ ಸಿಟಿಯ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ 2 ದಿನಗಳ ಹಿಂದೇ ಅನುಮಾನಾಸ್ಪದವಾಗಿ ತಾಯಿ-ಮಗು ಸಾವನ್ನಪ್ಪಿದ, ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನೇಣುಬಿಗಿದ ಸ್ಥಿತಿಯಲ್ಲಿ ದಂತವೈದ್ಯೆ ಶೈಮಾ(39),10 ವರ್ಷದ ಆರಾಧನಾ ಮೃತಪಟ್ಟಿದ್ದು ಪತ್ತೆಯಾಗಿದೆ. ಮಗು ಹತ್ಯೆಗೈದು ಶೈಮಾ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಕಾರಣವೇನೆಂದು ಇನ್ನು ತಿಳಿದುಬಂದಿಲ್ಲ. ಮುಂದುವರಿದ ತನಿಖೆ ನಡೆಸಲಾಗುತ್ತಿದೆ. ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.