ರಾಮನಗರ: ಕೌಟುಂಬಿಕ ಕಲಹದಿಂದ ಬೇಸತ್ತಂತ ತಾಯಿಯೊಬ್ಬಳು ತನ್ನ ಮಗುವಿನ ಜೊತೆಗೆ ಲಕ್ಷ್ಮಣ ರೇಖೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಹಾರೋಹಳ್ಳಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಮಗು ಸಾವನ್ನಪ್ಪಿದ್ರೇ, ತಾಯಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಗೋದೂರಿನಲ್ಲಿ ಗಂಡ-ಹೆಂಡತಿ ಜಗಳವಾಡಿಕೊಂಡಿದ್ದರು. ಇದರಿಂದ ಬೇಸತ್ತಂತ ಪತ್ನಿ 3 ವರ್ಷದ ಮಗ ದೀಕ್ಷಿತ್ ಗೌಡಗೆ ಲಕ್ಷ್ಮಣ ರೇಖೆ ಕೀಟನಾಶಕ ಕುಡಿಸಿ, ತಾನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದಂತ ತಾಯಿ-ಮಗನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ತೀವ್ರ ವಾಂತಿ, ಬೇಧಿಯಿಂದ 3 ವರ್ಷದ ದೀಕ್ಷಿತ್ ಗೌಡ ಸಾವನ್ನಪ್ಪಿದ್ರೇ, ಚಿಕಿತ್ಸೆಯ ಬಳಿಕ ತಾಯಿ ಪೂರ್ಣಿಮಾ ಚೇತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಘಟನೆಯ ಸಂಬಂಧ ಪೂರ್ಣಿಮಾ ವಿರುದ್ಧ ಪತಿ ಸೋಮಶೇಖರ್ ಹಾರೋಹಳ್ಳಿ ಠಾಣೆಗೆ ದೂರು ನೀಡಿದ್ರೇ, ಪತಿಯ ವಿರುದ್ಧ ಪೂರ್ಣಿಮಾ ಪೋಷಕರು ದೂರು ನೀಡಿದ್ದಾರೆ. ಈಗ ದೂರು, ಪ್ರತಿ ದೂರು ದಾಖಲಿಸಿಕೊಂಡಿರುವಂತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
BIG NEWS: ನಾವು ‘ಶ್ರೀರಾಮನ ಭಕ್ತ’ರು ಎನ್ನುತ್ತಲೇ ಮತ್ತೆ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ‘ಸಿಎಂ ಸಿದ್ಧರಾಮಯ್ಯ’
BREAKING: ಗದಗದಲ್ಲಿ ‘ಸರ್ಕಾರಿ ಬಸ್ ಹಾಗೂ ಲಾರಿ’ ನಡುವೆ ಭೀಕರ ಅಪಘಾತ: ಮೂವರು ಸಾವಿನ ಶಂಕೆ