ಅಗರ್ತಲಾ (ತ್ರಿಪುರ): ಶಿಕ್ಷಣದ ವಿಷಯದಲ್ಲಿ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬ ಮಾತನ್ನು 53 ವರ್ಷದ ಮಹಿಳೆಯೊಬ್ಬರು ಸಬೀತುಪಡಿಸಿದ್ದಾರೆ. ಶಿಲಾ ರಾಣಿ ದಾಸ್ ಎಂಬಾಕೆ ತಮ್ಮ ಮಕ್ಕಳ ಪ್ರೋತ್ಸಾಹ ಮತ್ತು ಸಹಾಯದಿಂದ ತ್ರಿಪುರ ಪ್ರೌಢ ಶಿಕ್ಷಣ ಮಂಡಳಿ (ಟಿಬಿಎಸ್ಇ) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ದಾಸ್ ಅವರು ತಮ್ಮ 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಈ ವರ್ಷದ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ (12 ನೇ ತರಗತಿ) ತನ್ನಿಬ್ಬರು ಹೆಣ್ಣು ಮಕ್ಕಳು ತೇರ್ಗಡೆಯಾಗಿದ್ದಾರೆ. TBSE (ತ್ರಿಪುರ ಬೋರ್ಡ್ ಆಫ್ ಸೆಕೆಂಡರಿ ಎಕ್ಸಾಮ್) ಫಲಿತಾಂಶಗಳನ್ನು ಪ್ರಕಟಿಸುತ್ತಿದ್ದಂತೆ ನಿನ್ನೆ ಟ್ರಿಪಲ್ ಡಿಲೈಟ್ ಬಂದಿದೆ.
ಶಿಲಾ ದಾಸ್ ಚಿಕ್ಕ ವಯಸ್ಸಿನಲ್ಲೇ ವಿವಾಹವಾಗಿದ್ದು, ಕೆಲವು ವರ್ಷಗಳಲ್ಲೇ ಆಕೆಯ ಪತಿ ಪತಿ ನಿಧನರಾದರು. ಇದು ಅವರ ಅಧ್ಯಯನದ ಪ್ರಯತ್ನಗಳಿಗೆ ತಡೆಯಾಗಿತ್ತು.
ವರ್ಷಗಳು ಕಳೆದ ನಂತ್ರ, ಇಬ್ಬರೂ ಹೆಣ್ಣುಮಕ್ಕಳು ತಮ್ಮ ತಾಯಿಯನ್ನು ಬೋರ್ಡ್ ಪರೀಕ್ಷೆ ಬರೆಯುವಂತೆ ಒತ್ತಾಯಿಸಿದರು. ಅದರ ನಂತರ ದಾಸ್ ತನ್ನ ಹೆಣ್ಣುಮಕ್ಕಳ ಮಾರ್ಗದರ್ಶನದಲ್ಲಿ ಪರೀಕ್ಷೆಗೆ ತಯಾರಿ ನಡೆಸಿದರು.
ದಾಸ್ ಅವರ ಪುತ್ರಿ ಜಯಶ್ರೀ ಅವರು ಅಗರ್ತಲಾದ ಬಾನಿ ವಿದ್ಯಾಪೀಠ ವಿದ್ಯಾಲಯದಿಂದ ಎಚ್ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. “ನಮ್ಮ ತಾಯಿ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನನ್ನ ಸಹೋದರಿ ಮತ್ತು ನಾನು ನಮ್ಮ 12 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇವೆ. ನಾವು ನಮ್ಮ ತಾಯಿಯ ಅಧ್ಯಯನಕ್ಕೆ ಸಹಾಯ ಮಾಡಿದೆವು. ಇದರಿಂದ ಅವರು ಸಂತಸಗೊಂಡಿದ್ದಾರೆ ಎಂದು ಪುತ್ರಿ ಜಯಶ್ರೀ ತಿಳಿಸಿದ್ದಾರೆ.
BIGG NEWS : ಸಿದ್ದರಾಮೋತ್ಸವದಿಂದ ನಮಗೆ ಯಾವುದೇ ಭಯವಿಲ್ಲ : ನಳಿನ್ ಕುಮಾರ್ ಕಟೀಲು
ಪಾಟ್ನಾ: 25 ವರ್ಷಗಳಿಂದ ತಮಗಾಗಿ ದುಡಿದ ಹಿಂದೂ ವ್ಯಕ್ತಿಯ ಅಂತಿಮ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಕುಟುಂಬ… Video