ಹಿಂದಿನಿಂದಲೂ ಮಹಿಳೆಯರಿಗೆ ತಮ್ಮ ಕೇಶದ ಬಗ್ಗೆ ಬಲು ಪ್ರೀತಿ, ಎಲ್ಲಿಲ್ಲದ ಕಾಳಜಿ. ಇದರ ಆರೈಕೆಗೆ ಸಾಕಷ್ಟು ಕಸರತ್ತು ನಡೆಸುತ್ತಾರೆ. ಹೊರ ಹೋಗುವ ಸಮಯದಲ್ಲಿ ಕೂದಲಿಂದಲೇ ವಿವಿಧ ಅಲಂಕಾರ ಮಾಡಿ, ಹೊಸ ರೀತಿಯ ಫ್ಯಾಷನ್ ಮಾಡಿಕೊಂಡು ಭಾರೀ ಸ್ಟೈಲ್ ಮಾಡುತ್ತಾರೆ. ಕೂದಲ ಬಗ್ಗೆ ಇಷ್ಟೆಲ್ಲಾ ಕಾಳಜಿ ಮಾಡುವ ಮಹಿಳೆಯರು ಮನೆಯಲ್ಲಿರುವಾಗ ತುರುಬು ಹಾಕುವುದು ಸಾಮಾನ್ಯವಾಗಿದೆ. ಸೆಕೆಯಿಂದ, ಪದೇ ಪದೇ ಜಡೆ ಹಾಕುವುದರಿಂದ ಇದು ಮುಕ್ತಿ ನೀಡುತ್ತದೆ. ಇದು ಒಂದು ರೀತಿಯಲ್ಲಿ ಸುಲಭ ಕೂಡ. ಕೂದಲು ಉದ್ದವಿರುವವರು ಈ ಹೇರ್ ಸ್ಟೈಲ್ ಮಾಡೋದು ಹೆಚ್ಚು. ಕೂದಲು ಬೇಗ ಧೂಳಾಗುವುದಿಲ್ಲ ಹಾಗೆ ಕೂದಲು ಹಾಳಾಗುವುದಿಲ್ಲ ಎನ್ನುವ ಕಾರಣಕ್ಕೆ ತುರುಬು ಕಟ್ಟುತ್ತಾರೆ. ಇಂದು ಮನೆಯಲ್ಲಿ ಮಾತ್ರ ತುರುಬು ಹಾಕುವುದಲ್ಲದೇ ಅದೊಂದು ಹೊಸ ಫ್ಯಾಷನ್ ಕೂಡ ಆಗಿದೆ.
ದಿನಾಲೂ ತುರುಬು ಹಾಕುವುದರಿಂದ ಈ ಎಲ್ಲಾ ಸಮಸ್ಯೆಗಳು ಎದುರಾಗಲಿವೆಯಾಗಿದೆ. ಹೆಚ್ಚು ತುರುಬು ಕಟ್ಟಿಕೊಳ್ಳುವವರಿಗೆ ಕೂದಲು ಸಮಸ್ಯೆ ಜಾಸ್ತಿಯಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುತ್ತದೆ. ತುರುಬು ಯಾವಾಗಲೂ ಕಟ್ಟುವುದರಿಂದ ಕೂದಲು ಬೇಗ ಆಯ್ಲಿಯಾಗುತ್ತದೆ. ಇದರಿಂದ ಮರುದಿನ ತಲೆ ಸ್ನಾನ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ತಲೆ ಹೊಟ್ಟು, ತುರಿಕೆ, ಕೂದಲು ಉದುರುವ ಸಮಸ್ಯೆ ಕಾಡುತ್ತದೆ.ಕೂದಲು ದುರ್ಬಲವಾಗುತ್ತದೆ. ಹಿಂದಕ್ಕೆ ಎಳೆದು ಕಟ್ಟುವುದರಿಂದ ರಕ್ತ ಸಂಚಾರ ಕಡಿಮೆಯಾಗುತ್ತದೆ. ಇದ್ರಿಂದ ಕೂದಲು ಉದುರುತ್ತದೆ. ಸದಾ ತುರುಬು ಕಟ್ಟುವುದರಿಂದ ಕೂದಲಿನ ಬೆವರು ಗಾಳಿಗೆ ಒಣಗುವುದಿಲ್ಲವಾಗಿದೆ. ಕೂದಲಿಗೆ ಬಿಡಿ ಬಿಡಿಯಾಗಿರಲು ಜಾಗ ಸಿಗುವುದಿಲ್ಲ. ಇದರಿಂದ ಕೂದಲು ವಾಸನೆ ಬರಲು ಶುರುವಾಗುತ್ತದೆ. ಜೊತೆಗೆ ಜಿಗುಟಾಗುತ್ತದೆ. ಕೂದಲು ಹೊಳಪು ಕಳೆದುಕೊಳ್ಳುತ್ತದೆಯಾಗಿದೆ.