ರಾಜಸ್ಥಾನ : ರಾಜಸ್ಥಾನದಲ್ಲಿ ಅಪಘಾತಕ್ಕೀಡಾದ ಮಿಗ್ -21 ಫೈಟರ್ ಜೆಟ್ನ ಪೈಲಟ್(MiG-21 fighter aircraft) ಗಳಲ್ಲಿ ಒಬ್ಬರಾದ ಲೆಫ್ಟಿನೆಂಟ್ ಅದ್ವಿಟಿಯಾ ಬಾಲ್ (Lieutenant advitiya Bal) ಅವರ ಪಾರ್ಥಿವ ಶರೀರವನ್ನು ಜಮ್ಮು ಮತ್ತು ಕಾಶ್ಮೀರದ ಅವರ ಸ್ವಗ್ರಾಮಕ್ಕೆ ತರಲಾಗುವುದು. ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಗುರುವಾರ ಸಂಜೆ ಮಿಗ್ -21 ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಾಯುಪಡೆ ನಿಲ್ದಾಣದಲ್ಲಿ ಪುಷ್ಪಗುಚ್ಛ ಸಮರ್ಪಣೆ ಸಮಾರಂಭ ನಡೆಯಲಿದೆ. ನಂತರ, ಪಾರ್ಥಿವ ಶರೀರವನ್ನು ಆರ್.ಎಸ್.ಪುರದಲ್ಲಿರುವ ಅವರ ಸ್ವಗ್ರಾಮಕ್ಕೆ ಕಳುಹಿಸಲಾಗುವುದು, ಅಲ್ಲಿ ಅಂತ್ಯಕ್ರಿಯೆ ಸಮಾರಂಭ ನಡೆಯಲಿದೆ.