Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಮೈಸೂರು ಸ್ಯಾಂಡಲ್‌ ಸೋಪ್‌’ಗೆ ಹೊಸ ರೂಪ: ಇಂದಿನಿಂದ 2 ವರ್ಷ ‘ನಟಿ ತಮನ್ನಾ’ ಪ್ರಚಾರ ರಾಯಭಾರಿ

09/02/2026 9:47 PM

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

09/02/2026 9:42 PM

BREAKING : ‘ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ’ಗೆ ಹಿಂಬಡ್ತಿ ; ‘BCCI ಕೇಂದ್ರ ಒಪ್ಪಂದ’ ಪ್ರಕಟ!

09/02/2026 9:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೆಂಗಳೂರಿನಿಂದ ಸೋಮನಹಳ್ಳಿಗೆ ಹೊರಟ ‘ಮಾಜಿ ಸಿಎಂ ಎಸ್.ಎಂ ಕೃಷ್ಣ’ ಪಾರ್ಥೀವ ಶರೀರ | SM Krishna
KARNATAKA

BREAKING: ಬೆಂಗಳೂರಿನಿಂದ ಸೋಮನಹಳ್ಳಿಗೆ ಹೊರಟ ‘ಮಾಜಿ ಸಿಎಂ ಎಸ್.ಎಂ ಕೃಷ್ಣ’ ಪಾರ್ಥೀವ ಶರೀರ | SM Krishna

By kannadanewsnow0911/12/2024 8:35 AM

ಬೆಂಗಳೂರು: ನಿನ್ನೆ ಅಕಾಲಿಕವಾಗಿ ನಿಧನರಾದಂತ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರದ ಅಂತಿಮಯಾತ್ರೆ ಇದೀಗ ಹುಟ್ಟೂರಿನತ್ತ ಬೆಂಗಳೂರಿನ ಸದಾಶಿವನಗರದಿಂದ ಹೊರಟಿದೆ. ದಾರಿಯುದ್ಧಕ್ಕೂ ಸಾರ್ವಜನಿಕರಿಗೆ ತೆರೆದ ವಾಹನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

ಇಂದು ಬೆಳಿಗ್ಗೆ 10.30ಕ್ಕೆ ಮದ್ಧೂರು ಪಟ್ಟಣವನ್ನು ಮಾಜಿ ಸಿಎಂ ಎಸ್ ಎಂ ಕೃಷ್ಣ ಪಾರ್ಥೀವ ಶರೀರ ತಲುಪಲಿದೆ. ಟೌನ್ ಹಾಲ್ ನಿಂದ ಸಾಗಲಿರುವಂತ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರವು, ಮೈಸೂರು ಬ್ಯಾಂಕ್ ಸರ್ಕಲ್, ಕೆ ಆರ್ ಆರ್ಚ್, ಕೆಂಗೇರಿ, ಬಿಡದಿ ಮೂಲಕ ಸಾಗಲಿದೆ.

ರಾಮನಗರ, ಚನ್ನಪಟ್ಟಣದಲ್ಲೂ ಅಭಿಮಾನಿಗಳು, ಹಿತೈಶಿಗಳಿಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10.30ಕ್ಕೆ ಮದ್ದೂರಿನ ಸೋಮನಹಳ್ಳಿಯನ್ನು ಪಾರ್ಥೀವ ಶರೀರ ತಲುಪಲಿದೆ.

ಬಿಗಿ ಪೊಲೀಸ್ ಬಂದೋಬಸ್ತ್

ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ದಕ್ಷಿಣ ವಲಯದ ಐಜಿಪಿ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ.

ಬಂದೋಬಸ್ತ್ ಗಾಗಿ ಅಂತ್ಯಕ್ರಿಯೆ ಸ್ಥಳದಲ್ಲಿ ಮಂಡ್ಯ ಜಿಲ್ಲೆಯ ಪೊಲೀಸರಲ್ಲದೇ ಹೊರ ಜಿಲ್ಲೆಗಳಿಂದಲೂ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರು ಎಸ್ ಪಿ, ಮೂವರು ಹೆಚ್ಚುವರಿ ಎಸ್ಪಿ ಹಾಗೂ 10 ಡಿವೈಎಸ್ಪಿಗಳನ್ನು ನಿಯೋಜಿಸಲಾಗಿದೆ.

ಇದಲ್ಲದೇ 70 ಪಿಎಸ್ಐ, 700 ಪೊಲೀಸ್ ಸಿಬ್ಬಂದಿ, 6 ಕೆಎಸ್ ಆರ್ ಪಿ, 6 ಡಿಎಎರ್ ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ದಕ್ಷಿಣ ವಲಯದ ಐಜಿಪಿ ಡಾ.ಬೋರಲಿಂಗಯ್ಯ ಅವರು ಅಂತ್ಯಕ್ರಿಯೆ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ಇಂದು ಮದ್ದೂರಲ್ಲಿ ಸ್ವಯಂ ಪ್ರೇರಿತ ಬಂದ್

ಇನ್ನೂ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ಮದ್ದೂರು ಪಟ್ಟಣದಲ್ಲಿ ಇಂದು ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ. ಮದ್ದೂರು ಬಂದ್ ಗೆ ವರ್ತಕರು, ಬೀದಿ ಬದಿಯ ವ್ಯಾಪಾರಿಗಳು, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಸಂಘದಿಂದ ಬೆಂಬಲ ಸೂಚಿಸಲಾಗಿದೆ.

ಒಕ್ಕಲಿಗರ ಸಂಘ, ದಲಿತಪರ ಸಂಘಟನೆಗಳೂ ಇಂದಿನ ಮದ್ದೂರು ಬಂದ್ ಗೆ ಬೆಂಬಲ ಸೂಚಿಸಿವೆ. ಇಂದು ಸೋಮನಹಳ್ಳಿಯಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಒಕ್ಕಲಿಗರ ಸಂಪ್ರದಾಯದಂತೆ ನೆರವೇರಿಸಲಾಗುತ್ತಿದೆ.

ವರದಿ: ವಸಂತ ಬಿ ಈಶ್ವರಗೆರೆ

BREAKING: ಶಿವಮೊಗ್ಗ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಬೆಚ್ಚಿ ಬೀಳಿಸೋ ಘಟನೆ: ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಪತಿ

ರಾಜ್ಯದ ‘ಬಗರ್ ಹುಕುಂ ಸಾಗುವಳಿ ರೈತ’ರಿಗೆ ಗುಡ್ ನ್ಯೂಸ್: ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀನೆಗೆ ಪರಿಗಣನೆ

Share. Facebook Twitter LinkedIn WhatsApp Email

Related Posts

‘ಮೈಸೂರು ಸ್ಯಾಂಡಲ್‌ ಸೋಪ್‌’ಗೆ ಹೊಸ ರೂಪ: ಇಂದಿನಿಂದ 2 ವರ್ಷ ‘ನಟಿ ತಮನ್ನಾ’ ಪ್ರಚಾರ ರಾಯಭಾರಿ

09/02/2026 9:47 PM2 Mins Read

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

09/02/2026 9:42 PM1 Min Read

ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್: ಅವಧಿ ಮುಗಿದ ಗ್ರಾಪಂ ಸದಸ್ಯರಿಗೆ ‘PDO ಅದ್ಧೂರಿ ಬೀಳ್ಕೊಡುಗೆ’

09/02/2026 9:17 PM3 Mins Read
Recent News

‘ಮೈಸೂರು ಸ್ಯಾಂಡಲ್‌ ಸೋಪ್‌’ಗೆ ಹೊಸ ರೂಪ: ಇಂದಿನಿಂದ 2 ವರ್ಷ ‘ನಟಿ ತಮನ್ನಾ’ ಪ್ರಚಾರ ರಾಯಭಾರಿ

09/02/2026 9:47 PM

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

09/02/2026 9:42 PM

BREAKING : ‘ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ’ಗೆ ಹಿಂಬಡ್ತಿ ; ‘BCCI ಕೇಂದ್ರ ಒಪ್ಪಂದ’ ಪ್ರಕಟ!

09/02/2026 9:39 PM

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬಿಸಿಸಿಐ ಶಾಕ್: ವಾರ್ಷಿಕ ಒಪ್ಪಂದದಲ್ಲಿ ಹಿಂಬಡ್ತಿ, ಶುಭಮನ್ ಗಿಲ್ ಗೆ ಬಡ್ತಿ

09/02/2026 9:35 PM
State News
KARNATAKA

‘ಮೈಸೂರು ಸ್ಯಾಂಡಲ್‌ ಸೋಪ್‌’ಗೆ ಹೊಸ ರೂಪ: ಇಂದಿನಿಂದ 2 ವರ್ಷ ‘ನಟಿ ತಮನ್ನಾ’ ಪ್ರಚಾರ ರಾಯಭಾರಿ

By kannadanewsnow0909/02/2026 9:47 PM KARNATAKA 2 Mins Read

ಬೆಂಗಳೂರು: ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆ.ಎಸ್.ಡಿ.ಎಲ್) ತಯಾರಿಸುವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಯ ಅಂಗವಾಗಿ ಖ್ಯಾತ…

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

09/02/2026 9:42 PM

ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್: ಅವಧಿ ಮುಗಿದ ಗ್ರಾಪಂ ಸದಸ್ಯರಿಗೆ ‘PDO ಅದ್ಧೂರಿ ಬೀಳ್ಕೊಡುಗೆ’

09/02/2026 9:17 PM

ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ.ಶಿವಕುಮಾರ್‌

09/02/2026 8:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.