ಬ್ರಸೆಲ್ಸ್: ಫಿಫಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಫ್ರಾನ್ಸ್ ವಿರುದ್ಧ 2-0 ಗೋಲುಗಳಿಂದ ಮೊರಾಕೊ ಸೋತಿದೆ. ಇದಾದ ನಂತ್ರ, ಮೊರಾಕೊ ಅಭಿಮಾನಿಗಳು ಬುಧವಾರ ಸಂಜೆ ಸೆಂಟ್ರಲ್ ಬ್ರಸೆಲ್ಸ್ನಲ್ಲಿ ಗಲಾಟೆ ಮಾಡಲು ಆರಂಭಿಸಿದ್ದು, ಇದನ್ನು ತಡೆಯಲು ಬಂದ ಪೊಲೀಸರ ಮೇಲೂ ದಾಳಿ ನಡೆಸಿದ್ದಾರೆ.
ಸುಮಾರು 100 ಫುಟ್ಬಾಲ್ ಅಭಿಮಾನಿಗಳು ಮೊರಾಕೊ ಧ್ವಜಗಳನ್ನು ಹಿಡಿದು ಬೀದಿಗಿಳಿದಿದು, ಸಂಭ್ರಮಿಸಲು ತಂದಿದ್ದ ಪಟಾಕಿಗಳನ್ನು ಪೊಲೀಸರ ಮೇಲೆ ಎಸೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ವೇಳೆ ಪೊಲೀಸರು ಹಲವಾರು ಅಭಿಮಾನಿಗಳನ್ನು ಬಂಧಿಸಿದ್ದಾರೆ. ಇನ್ನೂ ಘರ್ಷಣೆಯಲ್ಲಿ ಯಾರಿಗೂ ಯಾವುದೇ ಗಂಭೀರ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆದಾಗ್ಯೂ, ಮೊರೊಕನ್ ಬೆಂಬಲಿಗರ ಭಾಗವಾಗಿದ್ದ ಹುಡುಗನೊಬ್ಬ ಕಾರಿಗೆ ಸಿಲುಕಿ ಗಾಯಗೊಂಡಿದ್ದ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
BIGG NEWS : ‘ಬಿಜೆಪಿಯವರು ಮುಸಲ್ಮಾನರ ಮತಗಳಿಗೆ ಎಲ್ಲಿ ಕೈ ಹಾಕ್ತಾರೋ ಅನ್ನೋ ಭಯ’ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಯುಪಿ: ಮಗುವಿಗೆ ಜನ್ಮ ನೀಡಿದ 13 ವರ್ಷದ ಅತ್ಯಾಚಾರ ಸಂತ್ರಸ್ತೆ, ನಮಗೆ ಮಗು ಬೇಡವೆಂದು ನಿರಾಕರಿಸಿದ ಬಾಲಕಿಯ ತಂದೆ
BIGG NEWS : ‘ಬಿಜೆಪಿಯವರು ಮುಸಲ್ಮಾನರ ಮತಗಳಿಗೆ ಎಲ್ಲಿ ಕೈ ಹಾಕ್ತಾರೋ ಅನ್ನೋ ಭಯ’ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ