ಮಂಡ್ಯ: ಜೆಡಿಎಸ್ ಪಕ್ಷದ ( JDS Party ) ಪಂಚರತ್ನ ರಥಯಾತ್ರೆಯ ಬಳಿಕ, ಕಾಂಗ್ರೆಸ್ ಪಕ್ಷಕ್ಕೆ ( Congress Party ) ಬಿಗ್ ಶಾಕ್ ಎನ್ನುವಂತೆ ಇಂದು ಕೈ ತೊರೆದು, 75ಕ್ಕೂ ಹೆಚ್ಚು ಮಂದಿ ಜೆಡಿಎಸ್ ಪಕ್ಷವನ್ನು ಮಂಡ್ಯದ ಮಳವಳ್ಳಿಯಲ್ಲಿ ಸೇರ್ಪಡೆಯಾಗಿದ್ದಾರೆ.
ಮಂಡ್ಯದ ಮಳವಳ್ಳಿ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಇಂದು ಧನಗೂರು ಗ್ರಾಮದಲ್ಲಿ ನಡೆದಂತ ಜೆಡಿಎಸ್ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ ಅನ್ನದಾನಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ 75ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ತೊರೆದು ಸೇರ್ಪಡೆಯಾದರು.
ಈ ವೇಳೆ ಮಾತನಾಡಿದಂತ ಶಾಸಕ ಅನ್ನದಾನಿ ಅವರು, ನಾನು ಎಂಎಲ್ಎ ಆದ ನಂತ್ರ ಎರಡು ವರ್ಷ ಕೊರೋನಾ ಇತ್ತು. ಆದರೂ ಎದೆಗುಂದದೇ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ, ಪುಡ್ ಕಿಟ್ ಕೊಟ್ಟಿದ್ದೇನೆ. ಕ್ವಾರಂಟೈನ್ ನಲ್ಲಿ ಇದ್ದವರನ್ನು ಹಾಡಿನ ಮೂಲಕ ಖುಷಿ ಪಡಿಸಿದ್ದೇನೆ ಎಂದರು.
ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸರಿಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ. ಅವರ ಬಳಿ ಗಲಾಟೆ ಮಾಡಿ ಹಣ ಬಿಡುಗಡೆ ಮಾಡಿಸಿ ಅಭಿವೃದ್ಧಿ ಮಾಡಿದ್ದೇನೆ ಎಂದು ತಿಳಿಸಿದರು.
ನಮ್ಮ ಜೆಡಿಎಸ್ ಪಕ್ಷದ ಪಂಚರತ್ನ ಕಾರ್ಯಕ್ರಮ ಜಾರಿಯಾಗಬೇಕು. ರಾಜ್ಯದ ಜನರಿಗೆ ಉಪಯೋಗ ಇದೆ. ನಮ್ಮ ನಾಯಕರು ಮತ್ತು ಪಕ್ಷದ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು.
ವರದಿ: ಗಿರೀಶ್ ರಾಜ್, ಮಂಡ್ಯ
BREAKING NEWS: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಮಂಡ್ಯಯ ಶಿಕ್ಷಕ ಹೃದಯಾಘಾತದಿಂದ ಸಾವು
ನೀವು ಪೂಜಾರಿಯೇ? ರಾಮ ಮಂದಿರ ಉದ್ಘಾಟನೆ ದಿನಾಂಕ ಘೋಷಣೆಗೆ ಅಮಿತ್ಶಾಗೆ ಖರ್ಗೆ ತರಾಟೆ
BIG NEWS: ಗಣರಾಜ್ಯೋತ್ಸವದಲ್ಲಿ ಈ ಬಾರಿ ಇರೋಲ್ಲ ಕರ್ನಾಟಕದ ಸ್ಥಬ್ದ ಚಿತ್ರ