ನವದೆಹಲಿ: ದೇಶದಲ್ಲಿ ದತ್ತು ತೆಗೆದುಕೊಳ್ಳುವ ಬಗ್ಗೆ ಜನರ ಮನೋಭಾವವು ಈಗ ಬದಲಾಗುತ್ತಿದೆ. ಗಂಡು ಮಕ್ಕಳಂತೆ, ಹೆಣ್ಣುಮಕ್ಕಳು ಸಹ ಆದ್ಯತೆ ಪಡೆಯಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
ಹುಡುಗರಿಗಿಂತ ಹೆಚ್ಚು ಹುಡುಗಿಯರು ದತ್ತು ತೆಗೆದುಕೊಳ್ಳುತ್ತಾರೆ. ರಾಜ್ಯಸಭೆಯಲ್ಲಿ ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಕಳೆದ ಮೂರು ವರ್ಷಗಳಲ್ಲಿ ಬಾಲಕರಿಗಿಂತ ಬಾಲಕಿಯರನ್ನು ಹೆಚ್ಚು ದತ್ತು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದ ಇರಾನಿ, ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ಹೊಸ ನಿಯಮಗಳನ್ನು ಡಿಸೆಂಬರ್ 23 ರಂದು ಪರಿಚಯಿಸಲಾಗಿದೆ ಎಂದು ಹೇಳಿದರು. ಇದರ ನಂತರ, 580 ಕ್ಕೂ ಹೆಚ್ಚು ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದೆ ಅಂತ ತಿಳಿಸಿದರು.
ಹೊಸ ದತ್ತು ನೀತಿಯನ್ನು ಪರಿಚಯಿಸಿದಾಗ, ದತ್ತು ಸ್ವೀಕಾರಕ್ಕೆ ಸಂಬಂಧಿಸಿದ 900 ಪ್ರಕರಣಗಳು ರಾಜ್ಯಗಳ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ ಎಂದು ಅವರು ಹೇಳಿದರು. ರಾಜ್ಯಗಳು ಈ ನೀತಿಯನ್ನು ಅಳವಡಿಸಿಕೊಂಡ ಕೂಡಲೇ, 580 ಕ್ಕೂ ಹೆಚ್ಚು ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಯಿತು. ಇವರಲ್ಲಿ ವಯಸ್ಸಿನಲ್ಲಿ ಬೆಳೆದ ಮತ್ತು ಹಿಂದೆಂದೂ ದತ್ತು ಪಡೆಯದ ಮಕ್ಕಳು ಸೇರಿದ್ದಾರೆ ಅಂತ ತಿಳಿಸಿದ್ದಾರೆ.