Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯಾವಾಗ ಅಂದ್ರೆ ಆವಾಗ ನಿದ್ದೆ ಮಾಡ್ತೀರಾ? ಎಚ್ಚರ! ಹಾರ್ಟ್ ಅಟ್ಯಾಕ್ ಮತ್ತು ಸ್ಟ್ರೋಕ್ ಅಪಾಯದ ಬಗ್ಗೆ ಸಂಶೋಧಕರ ವಾರ್ನಿಂಗ್

06/04/2026 9:21 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸಾಲ ಸೌಲಭ್ಯಗಳು.!

06/04/2026 9:18 AM

ALERT : ಪುರುಷರೇ ಎಚ್ಚರ : ಸದ್ದಿಲ್ಲದೆ ನಿಮ್ಮನ್ನು ಕಾಡುವ ಈ 7 ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಜಾಗ್ರತೆ!

06/04/2026 9:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇ-ಸ್ವತ್ತು ಮತ್ತಷ್ಟು ಸೌಲಭ್ಯ: 11ಎ ಖಾತೆ ಹಾಗೂ ಬಹುಮಹಡಿ ಕಟ್ಟಡ ಅರ್ಜಿ ಸಲ್ಲಿಕೆಗೆ ಶೀಘ್ರದಲ್ಲೇ ಅವಕಾಶ- ಸಚಿವ ಪ್ರಿಯಾಂಕ್‌ ಖರ್ಗೆ
KARNATAKA

ಇ-ಸ್ವತ್ತು ಮತ್ತಷ್ಟು ಸೌಲಭ್ಯ: 11ಎ ಖಾತೆ ಹಾಗೂ ಬಹುಮಹಡಿ ಕಟ್ಟಡ ಅರ್ಜಿ ಸಲ್ಲಿಕೆಗೆ ಶೀಘ್ರದಲ್ಲೇ ಅವಕಾಶ- ಸಚಿವ ಪ್ರಿಯಾಂಕ್‌ ಖರ್ಗೆ

By kannadanewsnow0905/01/2026 7:31 PM

ಬೆಂಗಳೂರು: ಇ-ಸ್ವತ್ತು 2.0 ತಂತ್ರಾಂಶದಲ್ಲಿ ನಮೂನೆ-11ಬಿ ಖಾತೆಗಳನ್ನು ಎರಡು ವಾರಗಳ ಕಾಲವಾಧಿಯಲ್ಲಿ ನಮೂನೆ-11ಎ ಖಾತೆಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಮತ್ತು ಹೊಸ ಬಡಾವಣೆ ಮತ್ತು ಬಹುಮಹಡಿ (ಅಪಾರ್ಟ್‌ಮೆಂಟ್‌) ಕಟ್ಟಡಗಳಿಗೆ ಅರ್ಜಿಗಳನ್ನು ಸಲ್ಲಿಸಲು ಮುಂದಿನ ಒಂದು ತಿಂಗಳ ಅವಧಿಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಇ-ಸ್ವತ್ತು ಪ್ರಕ್ರಿಯೆ ಹಾಗೂ ತಂತ್ರಾಂಶವನ್ನು ಹೆಚ್ಚು ನಾಗರಿಕಸ್ನೇಹಿಯಾಗಿ ಅನುಷ್ಟಾನಗೊಳಿಸಲು ಇಲಾಖೆ ಬದ್ದವಾಗಿದ್ದು, ಅದರನ್ವಯ ತಂತ್ರಾಂಶವನ್ನು ಅಭಿವೃದ್ಧಿಪಡಿಸಿಲಾಗಿರುತ್ತದೆ. ಈವರೆಗೆ ಆನ್‍ಲೈನ್ ಮೂಲಕ 21,429 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅನುಮೋದನೆಗಾಗಿ ವಿವಿಧ ಹಂತದಲ್ಲಿ ಬಾಕಿ ಇರುತ್ತದೆ. ಕೆಲವೊಂದು ಅರ್ಜಿಗಳನ್ನು ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅವುಗಳನ್ನು ಸರಿಪಡಿಸುವಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಸ್ವತ್ತು ತಂತ್ರಾಂಶದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಮತ್ತಷ್ಟು ಸರಳಿಕರಿಸಲು ಕ್ರಮವಹಿಸಲಾಗುತ್ತಿದೆ, ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಅನುಮೋದನೆ ಮಾಡುವ ಪ್ರಕ್ರಿಯೆಯು ದಿನಾಂಕ:01.01.2026 ರಿಂದ ಆರಂಭಗೊಂಡಿದ್ದು, ಸಾರ್ವಜನಿಕರು ಇ-ಸ್ವತ್ತು 2.0 ತಂತ್ರಾಂಶದ ಆನ್-ಲೈನ್‌ ಪೋರ್ಟಲ್‌ ನ ಮೂಲಕ ತೆರಿಗೆ ಮತ್ತು ಪ್ರಿಟಿಂಗ್‌ ಶುಲ್ಕವನ್ನು ಪಾವತಿಸಿ, ಇ-ಖಾತಾವನ್ನು ಡೌನ್-ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇ-ಸ್ವತ್ತು ಅರ್ಜಿ ಸಲ್ಲಿಸಲು ಯಾವುದೇ ಕಾಲಾವಧಿಯನ್ನು ನಿಗದಿಪಡಿಸಲಾಗಿರುವುದಿಲ್ಲ, ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಭೇಟಿ ನೀಡದೆಯೇ ತಾವಿರುವಲ್ಲಿಯೇ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಮೂನೆಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ, ಸಮಸ್ಯೆ/ಸಂದೇಹಗಳನ್ನು ಬಗೆಹರಿಸಲು ಸರ್ಕಾರ ಬದ್ದವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕೆಂದು ಸಚಿವರು ಕೋರಿದ್ದಾರೆ.

ಇ-ಸ್ವತ್ತು 2.0 ರಡಿ ಅರ್ಜಿ ಸಲ್ಲಿಸಲು, ಸಂಬಂಧಿತ ದಾಖಲಾತಿ / ಪ್ರಕ್ರಿಯೆಯಲ್ಲಿ / ತಂತ್ರಾಂಶದ ಬಳಕೆಯ ಕುರಿತು ಸಂದೇಹಗಳಿದ್ದಲ್ಲಿ ತಮ್ಮ ಜಿಲ್ಲಾ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಜಿಲ್ಲಾ ಸಹಾಯವಾಣಿಗಳ ಸಂಖ್ಯೆಯನ್ನು“ಸಂಪರ್ಕಿಸಿ” ಶೀರ್ಷಿಕೆಯಡಿ ಮುಂದಿನ ಕೊಂಡಿ ಮೂಲಕ https://eswathu.karnataka.gov.in/Login.aspx ಪಡೆಯಬಹುದಾಗಿದೆ. ಅಲ್ಲದೇ  https://panchatantra.karnataka.gov.in ರಲ್ಲಿಯೂ ಪ್ರಕಟಿಸಲಾಗಿದೆ.

ಸಾಗರದ ‘ಕರಕುಶಲ ಕರ್ಮಿ’ಗಳಿಗೆ ಬೇಡಿಕೆ ಈಡೇರಿಸಲು ಅಗತ್ಯ ಕ್ರಮ: ‘ಶಾಸಕ ಗೋಪಾಲಕೃಷ್ಣ ಬೇಳೂರು’ ಭರವಸೆ

ರಾಜ್ಯ ಸರ್ಕಾರದಿಂದ ‘ಬಳ್ಳಾರಿ ಶೂಟೌಟ್’ ಮುಚ್ಚಿ ಹಾಕಲು ಷಡ್ಯಂತ್ರ್ಯ: HDK ಗಂಭೀರ ಆರೋಪ

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸಾಲ ಸೌಲಭ್ಯಗಳು.!

06/04/2026 9:18 AM2 Mins Read

ALERT : ಪುರುಷರೇ ಎಚ್ಚರ : ಸದ್ದಿಲ್ಲದೆ ನಿಮ್ಮನ್ನು ಕಾಡುವ ಈ 7 ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಜಾಗ್ರತೆ!

06/04/2026 9:16 AM2 Mins Read

GOOD NEWS : ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ಕ್ಕೆ ಅವಕಾಶ.!

06/04/2026 8:48 AM1 Min Read
Recent News

ಯಾವಾಗ ಅಂದ್ರೆ ಆವಾಗ ನಿದ್ದೆ ಮಾಡ್ತೀರಾ? ಎಚ್ಚರ! ಹಾರ್ಟ್ ಅಟ್ಯಾಕ್ ಮತ್ತು ಸ್ಟ್ರೋಕ್ ಅಪಾಯದ ಬಗ್ಗೆ ಸಂಶೋಧಕರ ವಾರ್ನಿಂಗ್

06/04/2026 9:21 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸಾಲ ಸೌಲಭ್ಯಗಳು.!

06/04/2026 9:18 AM

ALERT : ಪುರುಷರೇ ಎಚ್ಚರ : ಸದ್ದಿಲ್ಲದೆ ನಿಮ್ಮನ್ನು ಕಾಡುವ ಈ 7 ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಜಾಗ್ರತೆ!

06/04/2026 9:16 AM

ಹಣ್ಣುಗಳ ಮೇಲಿರುವ ಸ್ಟಿಕ್ಕರ್ ಎಚ್ಚರಿಕೆ! ತಿನ್ನುವ ಮುನ್ನ ತೆಗೆಯದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ: FSSAI ಖಡಕ್ ಸೂಚನೆ

06/04/2026 9:06 AM
State News
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸಾಲ ಸೌಲಭ್ಯಗಳು.!

By kannadanewsnow5706/04/2026 9:18 AM KARNATAKA 2 Mins Read

ಬೆಂಗಳೂರು: ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ-ಯುವತಿಯರು ಮತ್ತು ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ವಿವಿಧ…

ALERT : ಪುರುಷರೇ ಎಚ್ಚರ : ಸದ್ದಿಲ್ಲದೆ ನಿಮ್ಮನ್ನು ಕಾಡುವ ಈ 7 ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಜಾಗ್ರತೆ!

06/04/2026 9:16 AM

GOOD NEWS : ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ಕ್ಕೆ ಅವಕಾಶ.!

06/04/2026 8:48 AM

BIG NEWS : ಏಪ್ರಿಲ್ 8 ಕ್ಕೆ `ಕರ್ನಾಟಕ ದ್ವಿತೀಯ PUC’ ಫಲಿತಾಂಶ ಪ್ರಕಟ |Karnataka PUC Result

06/04/2026 8:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.