ದಕ್ಷಿಣಕನ್ನಡ : ಕರಾವಳಿ ಭಾಗದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದೆ.ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಇದ್ದ ಮುಸ್ಲಿಂ ವಿದ್ಯಾರ್ಥಿಗೆ ಹಲ್ಲೆ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಈ ಒಂದು ಘಟನೆ ನಡೆದಿದೆ. ಜನಾರ್ಧನ ಸ್ವಾಮಿ ದೇಗುಲದ ಬ್ರಹ್ಮ ಕಳಶೋತ್ಸವ ಜಾತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ. 17 ವರ್ಷದ ಮುಸ್ಲಿಂ ಬಾಲಕನ ದೂರಿನ ಮೇರೆಗೆ ಇದೀಗ ಕೇಸ್ ದಾಖಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂ ಸ್ನೇಹತೆಯರ ಜೊತೆಗೆ ಮುಸ್ಲಿಂ ಬಾಲಕ ಜಾತ್ರೆಗೆ ಬಂದಿದ್ದ. ಬಜರಂಗದಳ ಯುವಕರಿಂದ ಹಲ್ಲೆ ಮತ್ತು ಅಪಹರಣ ಮಾಡಿರುವ ಆರೋಪ ಕೇಳಿ ಬಂದಿದೆ. ಹಲ್ಲೆ ಮಾಡಿ ಕಿಡ್ನ್ಯಾಪ್ ಮಾಡಿರುವ ಆರೋಪ ಕೇಳಿ ಬಂದಿದೆ. ಹಿಂದೂ ಹುಡುಗಿಯರನ್ನು ಲಾಡ್ಜ್ ಗೆ ಕರೆದೊಯುತ್ತಿದ್ದಿಯಾ ಅಂತ ನಿಂದನೆ ಮಾಡಿದ್ದಾರೆ ಎಂದು ಬಾಲಕ ಆರೋಪಿಸಿದ್ದಾನೆ.








