ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅನ್ಯ ಕೋಮಿನ ಯುವಕರಿಂದ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ. ಅಪ್ರಾಪ್ತ ಕ್ರಿಶ್ಚಿಯನ್ ಬಾಲಕನ ಮೇಲೆ ಯಾವಕರಿಂದ ಹಲ್ಲೆ ಮಾಡಲಾಗಿದೆ.
ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮುಸ್ಲೀಂ ಯುವತಿಯೊಂದಿಗೆ ಬೈಕ್ ನಲ್ಲಿ ಹೋಗುವಾಗ ಹಲ್ಲೆ ಮಾಡಲಾಗಿದೆ. ಬೈಕ್ ಅಡ್ಡಗಟ್ಟಿ ಕ್ರಿಶ್ಚಿಯನ್ ಬಾಲಕನ ಮೇಲೆ ಮುಸ್ಲೀಂ ಯುವಕರು ಹಲ್ಲೆ ಮಾಡಿದಂತ ಆರೋಪ ಕೇಳಿ ಬಂದಿದೆ.
ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ಮಾಡಿದಂತ 8 ಮುಸ್ಲೀಂ ಯುವಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಪ್ರಾಪ್ತ ಬಾಲಕನ ಸಹೋದರ ನೀಡಿ ದೂರಿನ ಅನ್ವಯ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಬಾರಿಯ ‘ಬಜೆಟ್’ನಲ್ಲಿ ಇವುಗಳನ್ನು ಈಡೇರಿಸುವ ಘೋಷಣೆ ಮಾಡುವಂತೆ ಸಿಎಂ, ಡಿಸಿಎಂಗೆ MLC ದಿನೇಶ್ ಗೂಳಿಗೌಡ ಮನವಿ








